ಲೇಖಕ ವೈ.ಬಿ. ಕಡಕೋಳ ಅವರ ಕೃತಿ-ದೇಗುಲ ದರ್ಶನ. ಕೃತಿಯಲ್ಲಿ ಒಟ್ಟು 34 ಅಧ್ಯಾಯಗಳಿವೆ. ತಿಳಿನೀರಿನ ಜಲಧಾರೆಯ ತಪೋಭೂಮಿ ಬಸಿಡೋಣಿ, ಬೆನಕಟ್ಟಿ ಶ್ರೀ ದುರ್ಗಾದೇವಿ ದೇವಾಲಯ, ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠ ಚಿಕ್ಕುಂಬಿ, ಐತಿಹಾಸಿಕ ದೇವಾಲಯ ತಾಣ ಗೊಡಚಿ, ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪೂರ ದಾನಮ್ಮ ದೇವಿ, ಸಂಕ್ರಾಂತಿ ಹಬ್ಬದ ತೆಪ್ಪೋತ್ಸವ ಮುನವಳ್ಳಿ, ನೂರೊಂದು ಗಣಪತಿ ದೇವಾಲಯ ಮೈಸೂರು, ಜಡಿ ಸಿದ್ದೇಶ್ವರ ಪುಣ್ಯಕ್ಷೇತ್ರ ಸುಣಧೋಳಿ, ಬದಾಮಿ ಬನಶಂಕರಿ, ಇಷ್ಟಾರ್ಥಸಿದ್ಧಿ ನವಲಗುಂದ ಕಾಮದೇವ, ಶಕ್ತಿದೇವತೆ ಹುಲಿಗೆಮ್ಮ, ಕುಂದಾಪುರ ಕುಂದೇಶ್ವರ, ನುಗ್ಗಿಕೇರಿ ಆಂಜನೇಯ ದೇವಾಲಯ, ಶಬರಿಕೊಳ್ಳದ ಶಬರಿ ದೇವಾಲಯ, ತಿರುಪತಿ ತಿಮ್ಮಪ್ಪನ ಅನುಗ್ರಹದ ತುಳಸೀಗೇರಿ ಹಣಮಪ್ಪ, ಅಚ್ಯುತನ ಊರು ಅಚನೂರು ...ಹೀಗೆ ಒಟ್ಟು 34 ಅಧ್ಯಾಯಗಳ ಮೂಲಕ ಧಾರ್ಮಿಕ ತಾಣಗಳನ್ನು ಪರಿಚಯಿಸಿದ್ದಾರೆ.
ಸಾಹಿತಿ ಡಾ. ರೇಣುಕಾ ಅಮಲ್ಜರಿ ಅವರು ಕೃತಿಗೆ ಬೆನ್ನುಡಿ ಬರೆದು ‘ಲೇಖಕರು ಕರ್ನಾಟಕದುದ್ದಕ್ಕೂ ತಾವು ಕಂಡ ದೇವಾಲಯಗಳನ್ನು ಬರೀ ನೋಡಿ ಬರದೇ, ಅದರ ಇತಿಹಾಸವನ್ನೂ ಸಹ ತಿಳಿದು ಬರವಣಿಗೆಗೆ ಇಳಿಸುವ ಮೂಲಕ ಜನಸಾಮಾನ್ಯರಿಗೂ ದೇಶ ಸುತ್ತುವ ಮಹತ್ವವನ್ನು ತಿಳಿಸಿದ್ದಾರೆ. ಹೀಗಾಗಿ, ಕರ್ನಾಟಕ ದೇವಾಲಯಗಳ ಒಂದು ಕೈಪಿಡಿಯಂತೆ ಈ ಕೃತಿ ಉಪಯುಕ್ತ ಮಾಹಿತಿ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.