"ದಕ್ಷಿಣ ಕಾಶಿ ದರ್ಶನ " ಎಂಬ ಪುಸ್ತಕವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಕುರಿತಾಗಿದೆ. ಗ್ರಾಮಕ್ಕಿರುವ ನಾಲ್ಕು ಹೆಸರುಗಳು, ಗ್ರಾಮದ ಪ್ಲಸಿದ್ಧ ಶ್ರೀ.ಮೈಲಾರ ಮಲ್ಲಣ್ಣಾ ಹಾಗೂ ಶ್ರೀ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನಗಳು ಸೇರಿದಂತೆ ಹಲವು ದೇವಸ್ಥಾನ, 108 ಕುಂಡಗಳು ಹೀಗೆ ಹಲವು ವಿಶೇಷತೆಯನ್ನೊಳಗೊಂಡ ಮಾಹಿತಿಯನ್ನು ಯುವಸಾಹಿತಿಗಳಾದ ಮಾಣಿಕರಾವ ಪಾಟೀಲ ಹಾಗೂ ಆಕಾಶ ಹಿರಿವಗ್ಗೆ ಸೇರಿ ಹಿರಿಯರ ಮಾಹಿತಿ ಹಾಗೂ ಜನಪದರ ಆಧಾರದ ಮೇಲೆ ರಚಿಸಿದ್ದಾರೆ.
ಬೀದರ ನಗರದಿಂದ ಕೇವಲ 15 ಕಿ.ಮೀ. ದೂರದ ಮೈಲಾರ ಗ್ರಾಮವು ತನ್ನ ಧಾರ್ಮಿಕ ವೈಭವದೊಂದಿಗೆ ದಕ್ಷಿಣ ಕಾಶಿ ಎನಿಸಿದೆ. ಸಾಂಸ್ಕೃತಿಕ ಮಹತ್ವದ ಈ ಸಾಮರಸ್ಯದ ತಾಣದ ಧಾರ್ಮಿಕ ವೈಭವವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇತಿಹಾಸ ತಜ್ಞರು ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ದಾಖಲಿಸುವತ್ತ ಗಮನ ಸೆಳೆದಿದ್ದಾರೆ.
88
©2024 Book Brahma Private Limited.