‘ಬೆಂದ್ರೆ ಕಾವ್ಯ ಮತ್ತು ಜಾನಪದ’ ಲೇಖಕ ಡಾ. ಬಸವರಾಜ ಸಬರದ ಅವರ ಉಪನ್ಯಾಸದ ಪಠ್ಯರೂಪ. ಕೃತಿಯ ಕುರಿತು ತಿಳಿಸುತ್ತಾ ‘ದಿನಾಂಕ: 02-02-2006ರಂದು ಗಂಗಾವತಿಯಲ್ಲಿ, ವಿಶ್ವವಿದ್ಯಾಲಯದ ಪ್ರಸಾರಾಂಗವು ಏರ್ಪಡಿಸಿದ್ದ ಪ್ರಜಾರೋಪನ್ಯಾಸ ಮಾಲೆಯಲ್ಲಿ ನಾನು ಮಾಡಿದ ಉಪನ್ಯಾಸ ಈಗ ತಮ್ಮ ಕೈಯಲ್ಲಿ ಕೃತಿರೂಪದಲ್ಲಿದೆ. ಬೇಂದ್ರೆ ಕಾವ್ಯದಲ್ಲಿ ಸಮ್ಮಿಳಿತವಾಗಿರುವ ಜಾನಪದದ ಸಾಧ್ಯತೆಗಳನ್ನು ಈ ಕಿರುಕೃತಿಯಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. ಈ ಕೃತಿಯಲ್ಲಿ ಲೇಖಕರ ನುಡಿ, ಕುಲಪತಿಗಳ ನುಡಿ, ನಿರ್ದೇಶಕರ ಮಾತು, ಪ್ರಾಸ್ತಾವಿಕದ ಜೊತೆಗೆ ಬೇಂದ್ರೆಕಾವ್ಯದ ರಾಚನಿಕ-ಸ್ವರೂಪ, ಕಾವ್ಯಭಾಷೆ, ಒಗಟು-ಗಾದೆ-ಪಡೆನುಡಿ, ಜಾನಪದ ಜೀವನ ಹಾಗೂ ಸಮಾರೋಪ ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.