ಬಿ. ಜನಾರ್ದನ ಭಟ್ ಅವರ ‘ಬದುಕು ಭಾವದ ಕತೆಗಳು’ ಸಂಪಾದಿತ ಕತೆಗಳಾಗಿವೆ. ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಅವರು ಈ ಕೃತಿಯ ಬಗ್ಗೆ ಬರೆದಿದ್ದು, ಬಿ.ಜನರ್ದನ ಭಟ್ ಅವರು ಸಂಪಾದಕರಾಗಿರುವ ಈ ಪುಸ್ತಕವನ್ನು ಪುತ್ತೂರು ಕರ್ನಾಟಕ ಸಂಘದವರು ಪ್ರಕಟಿಸಿದ್ದಾರೆ. ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಯ ಕೆಲವು ಕಥೆಗಾರರ ಉತ್ತಮ ಕಥೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಇಲ್ಲಿರುವ ಒಂದೊಂದು ಕಥೆಗಳೂ ಭಾವನಾ ಪ್ರಧಾನವಾಗಿದ್ದು ಒಂದೊಂದು ಭಾವವನ್ನು ಉದ್ದೀಪಿಸುತ್ತದೆ. ಇಲ್ಲಿ ಬರುವ ಹದಿನಾಲ್ಕು ಕತೆಗಳೂ ಆಯಾಯ ಲೇಖಕರ ಅತ್ಯುತ್ತಮ ಕತೆಗಳ ಪಟ್ಟಿಯಲ್ಲಿರುವಂತದ್ದು ಎಂದಿದ್ದಾರೆ. ಇಲ್ಲಿರುವ ಕತೆಗಳೆಂದರೆ-.ವೈದ್ಯರ ಒಗ್ಗರಣೆ - ಪಂಜೆ ಮಂಗೇಶರಾಯರು,.ಧನಿಯರ ಸತ್ಯನಾರಾಯಣ - ಕೊರಡ್ಕಲ್ ಶ್ರೀನಿವಾಸ ರಾವ್, ಚೆನ್ನೆಮಣೆ - ಸೇಡಿಯಾಪು ಕೃಷ್ಣಭಟ್ಟ,ಅದ್ದಿಟ್ಟು - ಕಡೆಂಗೋಡ್ಲು ಶಂಕರಭಟ್ಟ,.ವಾಣಿಯ ಸಮಸ್ಯೆ - ಕೊಡಗಿನ ಗೌರಮ್ಮ,ಅವಳ ಉದ್ಧಾರ - ಗಿರಿಬಾಲೆ(ಸರಸ್ವತಿ ಬಾಯಿ ರಾಜವಾಡೆ),.ಗಂಗುವಿನ ಹರಕೆ- ಭಾರತೀಸುತ (S.ಖ. ನಾರಾಯಣ ರಾವ್),ಮಹಾದೇವನ ಮಣಿಮಕುಟ - ನಿರಂಜನ(ಶಿವರಾಯ),ಆನೆಗುಂಡಿಯ ಕಥೆ- ಕಾಕೆಮಾನಿ(ಬಿ.ಡಿ. ಸುಬ್ಬಯ್ಯ),ಹುಲಿ ಜೋಯಿಸರ ಕಥೆ - ಬಾಗಲೋಡಿ ದೇವರಾಯ,ಅಮ್ಮಚ್ಚಿಯೆಂಬ ನೆನಪು- ವೈದೇಹಿ,ನೀರ ಮೇಲೆ ನಡೆಯುವವನು - ಶಾಂತರಾಮ ಸೋಮಯಾಜಿ,ಮೀನು ಮಾರುವವನು - ಬೊಳುವಾರು ಮಹಮ್ಮದ್ ಕುಂಞಿ,ಪ್ರಾಣಪಕ್ಷಿ - ಅಬ್ದುಲ್ ರಶೀದ್ . 2003 ರಲ್ಲಿ ಮೊದಲ ಮುದ್ರಣಗೊಂಡ ಈ ಪುಸ್ತಕ 2007ರಲ್ಲಿ ಮರು ಮುದ್ರಣಗೊಂಡಿದೆ.
©2024 Book Brahma Private Limited.