ಲೇಖಕ ಶಂಕರ ಅಜ್ಜಂಪುರ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದವರು. ಬೆಂಗಳೂರು ವಿ.ವಿ. ಪದವೀಧರರು. ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ನಿಗಮ(ಎಲ್ ಅರ್ ಡಿ ಇ)ದಲ್ಲಿ ಮುದ್ರಣ ವಿಭಾಗದ ತಂತ್ರಜ್ಞಾನ ಅಧಿಕಾರಿಗಳಾಗಿ (2013) ನಿವೃತ್ತರು. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷಾ ಪ್ರವೀಣರು. ಮುದ್ರಣ ತಂತ್ರಜ್ಞಾನದಲ್ಲಿ ಪರಿಣಿತರು. ವಿದೇಶದಲ್ಲೂ ಈ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ಪರಿಸರ ಮತ್ತು ವಿಶಿಷ್ಟ ಪ್ರಾಣಿ-ಪಕ್ಷಿಗಳನ್ನು ಕುರಿತಂತೆ ಇವರು ಬರೆದ ಲೇಖನಗಳು ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೃತಿಗಳು: ಸೀತಾರಾಮ ಗೋಯೆಲ್ ಅವರ ‘Hindu society under seize’ ಕೃತಿಯನ್ನು 'ದಿಗ್ಬಂಧನದಲ್ಲಿ ಹಿಂದೂ ಸಮಾಜ' ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಅಂತರಜಾಲದಲ್ಲಿ ಅಜ್ಜಂಪುರ' ಎಂಬುದು ಇವರ ಬ್ಲಾಗ್. 'ಅಘೋರ ಯಾತ್ರೆ'ಯಲ್ಲಿ 'ವಿಮಲಾನಂದರ ಅಘೋರ ಯಾತ್ರೆ' ಎಂಬ ಧಾರಾವಾಹಿ, ಸಮಕ್ಷಮ (ಸುಧಾ ವಾರಪತ್ರಿಕೆಯಲ್ಲಿ ಮೂಡಿಬಂದ ಸಚಿತ್ರ ಲೇಖನಗಳ ಸಂಗ್ರಹ), ಕಾಲಭೈರವ (ಕಾಲಭೈರವನ ಕುರಿತಾದ ವ್ಯಾಪಕ ಸಂಶೋಧನಾತ್ಮಕ ಬರಹಗಳು) , ಭಾರತೀಯ ವಾಸ್ತುಶಿಲ್ಪ ಅವಲೋಕನ, ಹೊಯ್ಸಳ ವಾಸ್ತುಶಿಲ್ಪ ಅವಲೋಕನ, ವಿದೇಶಗಳಲ್ಲಿರುವ ಭಾರತೀಯ ಶಿಲ್ಪಗಳು, ವೇದ ಪರಿಚಯ (ವೇದ; ಪ್ರಶ್ನೋತ್ತರ ಮಾಲಿಕೆ)