ಲಲಿತಾ ಶೇಷಾದ್ರಿ ಅವರು ಬೆಂಗಳೂರು ಉತ್ತರ ಲಯನ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯ ಮೂಲಕ ಹಲವಾರು ದಶಕಗಳಿಂದ ಸಮಾಜಸೇವೆಯನ್ನು ಮಾಡಿದ್ದಾರೆ. ಅವರು ಸ್ವತಃ ಲೇಖಕಿಯಾಗಿದ್ದು ಹಲವಾರು ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಹಾಗೆಯೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 25 ವರ್ಷಗಳಿಂದ 'ಸೌಹಾರ್ದ ಕುಟುಂಬ ಸಲಹಾ ಕೇಂದ್ರದ ಸ್ಥಾಪಿತ ಅಧ್ಯಕ್ಷೆಯಾಗಿ ಮಹಿಳೆಯರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿರುತ್ತಾರೆ. ಹಲವಾರು ವರ್ಷಗಳಿಂದ ಅಂಗ ಕಾರುಣ್ಯ ಕೇಂದ್ರದ ಸದಸ್ಯೆಯಾಗಿ ಸುಮಾರು 10 ಸಾವಿರ ಜನಕ್ಕೆ ಕೃತಕ ಕಾಲು ಜೋಡಣೆಯಲ್ಲಿ ಸಹಾಯ ಮಾಡಿದ್ದಾರೆ.
ಕೃತಿಗಳು: ಅಷ್ಡದಶಾ ಪೀಠಗಳು ಹಾಗೂ ಪ್ರಸಿದ್ಧ ದೇವಿ ಕ್ಷೇತ್ರಗಳು ,81 ಶಿವಕ್ಷೇತ್ರ ಹಾಗೂ ನವಗ್ರಹ ಪರಿಹಾರ ಕ್ಷೇತ್ರಗಳು, ಸಪ್ತನದಿಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು, ಸುಬ್ರಹ್ಮಣ್ಯ ಕ್ಷೇತ್ರಗಳು ಹಾಗೂ ಪರಿಹಾರ ಕ್ಷೇತ್ರಗಳು, 51 ಅಕ್ಷರ ಶಕ್ತಿ ಪೀಠಗಳು