About the Author

ಎಚ್.ವಿ. ರಾಮಚಂದ್ರರಾವ್ ಅವರು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯವರು. ಶಾನಭೋಗ ಮನೆತನದವರು. ಚಿಕ್ಕಬಳ್ಳಾಪುರದಲ್ಲಿ ಎಸ್.ಎಸ್.ಎಲ್.ಸಿವರೆಗೆ ಓದಿದ್ದು, ಮೈಸೂರಿನ ರಿಯಾಸತ್ ಹಿಂದಿ ಪ್ರಚಾರ ಸಮಿತಿಯಲ್ಲಿ (1949) ರಾಷ್ಟ್ರಭಾಷಾ ವಿಶಾರದ ಪಾಸ್ ಮಾಡಿದರು. ಶಿಡ್ಲಘಟ್ಟದ ಬಿ. ವಿರೂಪಾಕ್ಷ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು.ಅಂಚೆ ತೆರಪಿನ ಶಿಕ್ಷಣದ ಮೂಲಕ ಬನಾರಸ್ ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪಾಸ್ ಮಾಡಿದರು. ನಂತರ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ  ನೇಮಕಗೊಂಡು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. 

ಹರಿಕಥಾಮೃತಸಾರ, ಶ್ರೀಮದ್ ಭಾಗವತ ಕಥಾಮೃತ, ಕಬೀರ ವಚನಾವಳಿ, ರಾಮಚರಿತ ಮಾನಸ ಒಂದು ರಸಯಾತ್ರೆ, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರೆ ಕಥೆಗಳು ಸೇರಿದಂತೆ 16ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 

ಹಿಂದಿ ಮಾತನಾಡದ ರಾಜ್ಯದ ಲೇಖಕರಿಗೆ ನೀಡುವ ಮಾನವ ಸಂಪನ್ಮೂಲ ಮಂತ್ರಾಲಯದ ಪ್ರಶಸ್ತಿ, ಶಬ್ದ ಸಾಹಿತ್ಯ ಸಮ್ಮಾನ ಪ್ರಶಸ್ತಿ, ಹಿಂದಿ ಮಾರ್ತಂಡ ಪ್ರಶಸ್ತಿ, ಹಿಂದಿ ಸೌಹಾರ್ದ ಸನ್ಮಾನ್, ವಿಶಿಷ್ಟ ಹಿಂದಿ ಸೇವಾ ಸನ್ಮಾನ್ ಹೀಗೆ ಹಲವು ಪ್ರಶಸ್ತಿ-ಗೌರವಗಳು ಲಭಿಸಿವೆ. 

ಎಚ್.ವಿ. ರಾಮಚಂದ್ರರಾವ್‌