ಕರಾಕೃ ಎಂದು ಜಾನಪದ -ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಇರುವ ಕೆ.ಆರ್. ಕ್ರಿಷ್ಣಸ್ವಾಮಿ ಮಂಡ್ಯ ಮೂಲದ ಕವಿ-ಲೇಖಕ-ವಿದ್ವಾಂಸ. ನಾಗಮಂಗಲದಲ್ಲಿ ಜನಿಸಿದಿ ಅವರು ಹಾಸನ, ಮಲೆನಾಡು, ಚಿತ್ರದುರ್ಗ, ದಾವಣಗೆರೆ ಹೀಗೆ ನಾಡಿನ ಹಲವು ಹಳ್ಳಿಗಳನ್ನು ಸುತ್ತಿ ಅನೇಕ ಬಗೆಯ ಜನಪದ ಗೀತೆಗಳನ್ನು ಸಂಗ್ರಹಿಸಿ ಕೊಟ್ಟವರು. ಹಿರಿಯ ಕಲಾವಿದ ಆರ್.ಎಸ್. ನಾಯ್ಡು ಅವರಿಗೆ ಚಿರಪರಿಚಿತರಾಗಿದ್ದ ಕರಾಕೃ ಅವರು ತಮ್ಮ ಜಾನಪದ ಸಂಗ್ರಹದ ಕೃತಿಗಳಿಗೆ ನಾಯ್ಡು ಅವರ ರೇಖಾಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದರು. ಅವರ ಮನೆಯೇ ಒಂದು ವಸ್ತು ಸಂಗ್ರಹಾಲಯದಂತಿದೆ. ಅಪರೂಪದ ಕಲಾಕೃತಿಗಳು, ಹಸ್ತಪ್ರತಿಗಳು ಅವರ ಸಂಗ್ರಹದಲ್ಲಿವೆ.
ಕಾಳಿಂಗರಾಯ, ಜಾನಪದ ಕಥನ ಗೀತೆಗಳು, ಜಾನಪದ ಪ್ರೇಮಗೀತೆಗಳು, ಹೆಣ್ಣು ಕೊಟ್ಟೇವು ಅವರ ಕೆಲವು ಪ್ರಕಟಿತ ಕೃತಿಗಳು.