ಕತೆಗಾರ್ತಿ, ಲೇಖಕಿ ಲಲಿತಾಂಬಾ ಚಂದ್ರಶೇಖರ್ ಅವರು ಅನುವಾದಕಿ. ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಇಡಿ., ಪಿ.ಜಿ.ಡಿ.ಟಿ.ಇ. ಪದವೀಧರೆ. ಹೈದ್ರಾಬಾದ್ ಶಿಕ್ಷಣ ವಿಶ್ವವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರು. 15-02-1929 ರಂದು ಜನಿಸಿದ್ದು, ಮೂಲತಃ ದಾವಣಗೆರೆಯವರು. ತಂದೆ ಬಿ. ಎಸ್. ವೆಂಕಟಕೃಷ್ಣಯ್ಯ, , ತಾಯಿ ಎಸ್. ಪಾರ್ವತಮ್ಮ.
‘ಪರ್ಲ್ ಎಸ್, ಬಕ್’ ಅವರ ಸಣ್ಣಕತೆಗಳನ್ನು ಕನ್ನಡಕ್ಕೆ 1952ರಲ್ಲಿ ಭಾಷಾಂತರಿಸಿದ್ದಾರೆ. `ಮುಕುಂದ ಚಂದ, ಪುನರ್ದತಾ, ರೇಖಾ ಭಾಗ-1, ಭಾಗ-2, ಸರಸ್ವತಿ ಸಂಹಾರವೇ?, ಸ್ವೀಕಾರ , ಸುಕನೈಯರು' ಕೃತಿಗಳನ್ನು ಹೊರತಂದರು.
ಅವರ ‘ವಿಮೋಚನೆ’ ನೀಳ್ಗತೆ 1954ರಲ್ಲಿ, ‘ಬಿಡಿ ಹೂಗಳು’ 1966ರಲ್ಲಿ, ‘ನಾದದ ಹಾದಿಯಲ್ಲಿ’ ಎಂಬ ಅವರ ಕಥಾ ಸಂಕಲನಗಳು ಪ್ರಕಟವಾಗಿವೆ.
ಅವರ ಸಾಹಿತ್ಯ ಮತ್ತು ಶಿಕ್ಷಣ ಸೇವೆಯನ್ನು ಪರಿಗಣಿಸಿ ಮೂರು ಬಾರಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ, ಮಂಗಳಾ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಮುಂಬೈಯ ಭಾರತೀಯ ವಿದ್ಯಾಭವನದಿಂದ ಅತ್ಯುತ್ತಮ ಕತೆಗಾರ್ತಿ ಪ್ರಶಸ್ತಿ, ಕ. ಸಾ. ಪ. ದಿಂದ ಉತ್ತಮ ಮಹಿಳಾ ಸಾಹಿತ್ಯ ಪ್ರಶಸ್ತಿ, ಲಿಪಿಪ್ರಾಜ್ಞೆ ಪ್ರಶಸ್ತಿಗಳು ಅವರಿಗೆ ಲಭಿಸಿವೆ.