ಬೆಂಗಳೂರು ನಿವಾಸಿ ಬಿ.ಎಸ್. ಪಾರಿಜಾತ ಮೋಹನ ಅವರು (ಜನನ: 26-01-1971) ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ಎಂ.ಎ ಪದವೀಧರೆ. ತತ್ವಶಾಸ್ತ್ರ ಮತ್ತು ಜಾನಪದ ಸಾಹಿತ್ಯದಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿನಿಯೂ ಆಗಿದ್ದಾರೆ. ರೇಖಾಚಿತ್ರ ರಚನೆ, ಸಂಗೀತ, ನಾಟಕ, ಕಾರ್ಯಕ್ರಮ ನಿರೂಪಣೆಯಲ್ಲಿ ಆಸಕ್ತಿ. ವಿಜಯ ಕರ್ನಾಟಕ ದಿನಪತ್ರಿಕೆಯ ಲೈಫ್ ಸ್ಟೈಲ್, ವೆರೈಟಿ, ಫುಡ್ ಕೋರ್ಟ್, ಗಾರ್ಡನ್ ಟಿಪ್ಸ್ ವಿಭಾಗಗಳ ಅಂಕಣಗಾರ್ತಿ. ಇವರ ಲೇಖನ-ಕತೆ-ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು. ನಾಡಗುಡಿಗಳು ಹಾಗೂ ದೇಗುಲ ದರ್ಶನ-ಇವು ಪಾರಿಜಾತ ಅವರ ಕೃತಿಗಳು.
ಪ್ರಶಸ್ತಿಗಳು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ರಾಜ್ಯಮಟ್ಟದ ಕುವೆಂಪು ಪ್ರಶಸ್ತಿ, ವೃತ್ತಿ ಜೀವನದ ಉತ್ಕೃಷ್ಟ ಕೊಡುಗೆಗಾಗಿ ರಂಗಮ್ಮ ಪ್ರಶಸ್ತಿ, ಉತ್ತಮ ಶಿಕ್ಷಕಿ ಪ್ರಶಸ್ತಿ, ರಾಜ್ಯ ಮಟ್ಟದ ಜನಪ್ರಿಯ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ, ರೋಟರಿ ಸಂಸ್ಥೆಯ ಪ್ರೊಫೆಷನಲ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿವೆ.