
ʻಕರ್ನಾಟಕ ಪ್ರಕೃತಿ ವಿಕೋಪಗಳು-ಆತಂಕಗಳುʼ ಡಾ. ಅ. ನ ಯಲ್ಲಪ್ಪ ರೆಡ್ಡಿ ಅವರ ಕೃತಿಯಾಗಿದೆ. ನೈಸರ್ಗಿಕ ಕಾಡುಗಳ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳ ರಕ್ಷಣೆ ಅವರ ಆಸಕ್ತಿಯ ಕ್ಷೇತ್ರ, ಪಶ್ಚಿಮ ಘಟ್ಟಗಳ ವಿಚಾರಕ್ಕೆ ಬರುವುದಾದರೆ ಭೂಮಿತಾಯಿಯ ಒಡಲನ್ನು ಬರಿದು ಮಾಡಿ, ಚರ್ಮ, ಮಾಂಸಗಳನ್ನು ಕಿತ್ತು ತಿನ್ನಲಾಗಿದೆ. ಅದರ ಪರಿಣಾಮ ವಾಗಿಯೇ ಬೆಟ್ಟಗುಡ್ಡಗಳು ಕುಸಿದು ಭೂಮಿತಾಯಿಯ ಕೆಂಪು ಬಣ್ಣದ ರಕ್ತವನ್ನು ಮಣ್ಣಿನೊಂದಿಗೆ ಸೇರಿ ಇಡೀ ಭೂಪ್ರದೇಶವೇ ಹಲವೆಡೆ ನೆಲಸಮವಾಗಿದೆ. ಸ್ವರ್ಗಸಮಾನವಾಗಿದ್ದ ಭೂಮಿತಾಯಿಯನ್ನು ನಮ್ಮ ರಾಜಕಾರಣಿಗಳು, ನಾಯಕರು, ಇಂಜಿನಿಯರುಗಳು, ಕಂಟ್ರಾಕ್ಟರುಗಳು ಹೇಗೆ ಹರಿದು ಹಂಚಿ ತಿಂದು ತೇಗಿದರು ಎಂಬುದು ಕರಾಳವೆನಿಸುವ ಅಧ್ಯಾಯ "ದ್ವೇಷ ಬೇಡ ಮಾನವೀಯತೆ ಮೆರೆಯಿರಿ, ಸಾಮೂಹಿಕ ವಿನಾಶವನು ತಡೆಗಟ್ಟಿ" ಎಂಬ ಲೇಖನದಲ್ಲಿ ಇದನ್ನೆಲ್ಲ ವಿವರವಾಗಿ ಹೇಳಲಾಗಿದೆ.
©2025 Book Brahma Private Limited.