ಡಾ. ಯು.ಎನ್. ಸಂಗನಾಳಮಠ ಅವರು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸಂಗ್ರಹಿಸಿದ ಕೃತಿ ಇದು. ಸ್ವಾಮಿ ವಿವೇಕಾನಂದರು ಭಾರತದ ನೈಜತೆಯನ್ನು ಬಲ್ಲವರು. ಭಾರತೀಯ ಸಂಸ್ಕೃತಿಯು ಇತರೆ ದೇಶಗಳ ಸಂಸ್ಕೃತಿಗಿಂತ ಹೇಗೆ ಭಿನ್ನ?, ಪಾಶ್ಚಾತ್ಯ ಸಂಸ್ಕೃತಿಯಿಂದ ಕಲಿಯಬೇಕಾದದ್ದು ಏನು? ಅನ್ಯ ಧರ್ಮೀಯ ತತ್ವಗಳು ಹಿಂದೂ ಧರ್ಮಕ್ಕೆ ಏಕೆ ಅಗತ್ಯ ? ಇಂತಹ ನೂರಾರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬಲ್ಲವು. ದೈಹಿಕ ಶ್ರಮಿಲ್ಲದೇ ಇತರರನ್ನು ಶೋಷಿಸುವ ಹಿಂದೂ ಧರ್ಮದ ವಿರುದ್ಧವೂ ಅವರು ಬಿಚ್ಚುನುಡಿಗಳನ್ನು ಆಡಿದ್ದಾರೆ. ಸ್ವಾಮಿ ವಿವೇಕಾನಂದರ ವಿಚಾರಗಳು ಕ್ರಾಂತಿಕಾರಿಯೂ ಆಗಿವೆ. ಇಡೀ ಮನುಕುಲದ ಶಕ್ತಿಯಾಗಿವೆ ಎಂಬುದನ್ನು ತಿಳಿಸುವ ಉಪಯುಕ್ತ ಕೃತಿ ಇದು.
©2024 Book Brahma Private Limited.