‘ಶಿವಾಪುರ ಕಂಬಾರ ನಮಸ್ಕಾರ’ ಕೃತಿಯು ಜಯಪ್ರಕಾಶ ಮಾವಿನಕುಳಿ ಅವರ ಸಂಪಾದಿತ ಚಂದ್ರಶೇಖರ ಕಂಬಾರ ಕುರಿತ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಯ ಪರಿವಿಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ದೇಸಿ ಕವಿಗೆ ‘ಪಂಪ’ ಸಮ್ಮಾನ - ಡಾ. ಕೃಷ್ಣಮೂರ್ತಿ ಹನೂರು, ಸಂಸ್ಕೃತಿ ಹರಿಕಾರ ಚಂದ್ರಶೇಖರ ಕಂಬಾರ-ಡಾ.ನಾಗವೇಣಿ ಎಚ್, ಕಿಂದರಿಜೋಹಗಿಯ ವೇಷ, ಆವೇಷ-ಡಾ. ಎಚ್.ಎಸ್. ವೆಂಕಟೇಶ ಮೂರ್ತಿ, ಜಾನಪದದ ಸಿರಿ ಚಂದ್ರಶೇಖರ ಕಂಬಾರ-ಡಾ. ಜಿ.ಆರ್. ತಿಪ್ಪೇಸ್ವಾಮಿ, ಕಾವ್ಯಕಿಂದರಿಜೋಗಿಗೆ ಪಂಪ ಪುರಸ್ಕಾರ- ನಿಂಗಪ್ಪ ಆರ್. ಠಕ್ಕಾಯಿ, ಅಪೂರ್ವ ಕವಿ, ನಾಟಕಕಾರ ಕಂಬಾರ- ಡಿ.ವಿ.ರಾಜಶೇಖರ, ದೇಶೀ ಸಂಸ್ಕೃತಿ ಕರ್ತಾರ, ಡಾ. ಕಂಬಾರರಿಗೆ ಡಬ್ಬಲ್ ಪ್ರಮೋಶನ್- ರಾ.ಬ. ಏಳುಕೋಟಿ, ಪಂಪ ಪ್ರಶಸ್ತಿ ಪಡೆದ ಡಾ. ಚಂದ್ರಶೇಖರ ಕಂಬಾರ- ಎನ್. ಆರ್. ರೂಪಶ್ರೀ, ಚಂದ್ರಶೇಖರ ಕಂಬಾರ ಹೇಳತಾರ ಕೇಳ.. ಬೇಳೂರು ಸುದರ್ಶನ, ಕಂಬಾರ: ಕಾಡು ಕುದುರೆಯೇರಿದ ಕಬೀರ- ಜಾನಕಿ, ಜಾನಪದ ಕೋಗಿಲೆಗೆ ಒಲಿದ ಕಬೀರ- ಗಂಗಾಧರ ಮೊದಲಿಯಾರ್, ಕಂಬಾರರ ನಾಟಕಗಳ ಜಾನಪದ ಸೊಗಡು- ಡಾ. ನಿಂಗಣ್ಣ ಸಣ್ಣಕ್ಕಿ ಕಂಬಾರ: ದಣಿವು ಕಾಣದ ಜೀವನೋತ್ಸಾಹ-ಶರತ್ ಕಲ್ಕೋಡ್, ಕಬ್ಬಿಣದ ಕಡಲೆಯನ್ನು ಹದ ಮಾಡಿದ ಕಂಬಾರ- ಚಿತ್ರಗುಪ್ತ, ಕಂಬಾರರಿಗೆ ಕಬೀರ್ ಸಮ್ಮಾನ್- ಪ್ರೊ. ಎಚ್.ಎಸ್. ಉಮೇಶ್, ಅರುವತ್ತರ ಹಾಡುಹಕ್ಕಿ- ಜಿ.ಎನ್. ರಂಗನಾಥ ರಾವ್, ಡಾ. ಚಂದ್ರಶೇಖರ ಕಂಬಾರರಿಗೆ ಅರುವತ್ತು-ಶಿಶಿರ, ಡಾಆ. ಚಂದ್ರಶೇಖರ ಕಂಬಾರ- ವ್ಯಕ್ತಿ ಚಿತ್ರ, ಸಮೃದ್ಧ ಕಂಬಾರ- ಡಾ. ರಾಜೀವ ತಾರನಾಥ, ಸಾಂಸ್ಕೃತಿಕ ವಿಸ್ಮೃತಿ ಮತ್ತು ಕಂಬಾರರ ಚಿಂತನೆಗಳು- ಡಾ. ವಿರೇಶ ಬಡಿಗೇರ, ನಿಷ್ಕಲ್ಮಶ ಹೃದಯವಂತ ಕಂಬಾರರು-ಬಿ.ಬಿ. ಶಿವಣ್ಣ ಮಂಗಳೂರು ಇಷ್ಟು ಭಾಗವು ಒಂದನೇಯ ಅಧ್ಯಾಯನದ ವಿಚಾರವನ್ನು ಒಳಗೊಂಡಿದೆ. ಎರಡನೇ ಅಧ್ಯಾಯನದಲ್ಲಿ ಸಂದರ್ಶನ ವಿಭಾಗವು ಒಳಗೊಂಡಿದ್ದು, ಜಾನಪದ ಸತ್ವದ ಜಾದೂಗಾರ ಕನ್ನಡದ ಕಂಬಾರ-ಜಿ.ಪಿ.ಬಸವರಾಜು, ನಾನಿನ್ನೂ ನನ್ನ ಮಹತ್ವದ ಕೃತಿ ಬರೆದಿಲ್ಲ- ಜಿ.ಎನ್. ರಂಗನಾಥ ರಾವ್, ಡಾ. ಚಂದ್ರಶೇಖರ ಕಂಬಾರ, ಶ್ರೀನಿವಾಸ ಪ್ರಭು, ರಷ್ಯಾಕ್ಕೆ ಹೋಗಿಬಂದ ಕಂಬಾರರೊಂದಿಗೆ- ಚಂದ್ರಶೇಖರ ಆಲೂರು, ಚಲನಚಿತ್ರ ಮಾಧ್ಯಮ: ಡಾ. ಚಂದ್ರಶೇಖರ ಕಂಬಾರರು ಏನು ಹೇಳುತ್ತಾರೆ- ಜಯಸಿಂಹ ಕೆಂಗೇರಿ, ನಾವು ಈಗ ಆ ಸ್ವರ್ಗವನ್ನು ಕಳೆದುಕೊಂಡಿದ್ದೇವೆ- ಪ್ರೊ. ಕೀರ್ತಿನಾಥ ಕುರ್ತಕೋಟಿ, ನಾನು ನವ್ಯಕ್ಕಿಂತ ನವ್ಯ-ಜೀಯಾರ್, ನಿರಾಶೆಯ ವಾತಾವರಣದ ನಡುವೆಯೇ ಉಲ್ಲಾಸದ ಭರವಸೆಯ ಬೀಜ ಬಿತ್ತುವ ಪ್ರಯತ್ನ ನನ್ನದು- ಡಿ.ವಿ. ರಾಜಶೇಖರ, ನಿಮ್ಮ ಮೇಲೆ ನಂಬಿಕೆಯಿರಲಿ, ನಿಮ್ಮ ಭಾಷೆಯ ಮೇಲೂ… ಜೋಗಿ ವಿಚಾರವನ್ನು ಒಳಗೊಂಡಿದೆ. ಮೂರನೇ ಸೊಲ್ಲಿನಲ್ಲಿ ಅವಲೋಕನ ವಿಭಾಗವು ಒಳಗೊಂಡಿದ್ದು, ಕರಿಮಾಯಿ: ಗ್ರಾಮೀಣ ಜೀವನದ ನಾಟಕೀಯ ಅಂಶಗಳು- ಡಾ. ಶಾಂತಿನಾಥ ದೇಸಾಯಿ, ಕಂಬಾರರ ಸಿಂಗಾರೆವ್ವ ಮತ್ತು ಅರಮನೆ- ಡಾ. ಜಯಪ್ರಕಾಶ ಮಾವಿನಕುಳಿ, ಸಿಂಗಾರೆವ್ವ ಮತ್ತು ಅರಮನೆ- ಡಾ. ಕಮಲಾ ಹಂಪನಾ, ಜೀಖೆ ಮಾಸ್ತರರ ಪ್ರಣಯ ಪ್ರಸಂಗ- ಪ್ರೊ. ಉದ್ಯಾವರ ಮಾಧವಾಚಾರ್ಯ, ಸಿರಿಸಂಪಿಗೆ- ಪ್ರೊ.ಟಿ. ಅಶೋಕ, ಬೆಳ್ಳಿಮೀನು- ಪ್ರೊ.ಜಿ.ಎಸ್.ಅಮೂರ, ಹುಲಿಯ ನೆರಳು-ಪ್ರೊ.ಬೋರಲಿಂಗಯ್ಯ, ಸಿರಿಸಂಪಿಗೆ- ಮಲ್ಲೇಪುರಂ ಜಿ. ವೆಂಕಟೇಶ, ಕರಿಮಾಯಿ: ಮರು ಓದು- ಪ್ರೊ.ಟಿ.ಪಿ ಅಶೋಕ, ಚಕೋರಿ- ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಸಿರಿಸಂಪಿಗೆ- ಡಾ ದಿವಸದ್ಪತಿ ಹೆಗಡೆ.
©2024 Book Brahma Private Limited.