ಸಾಮವೇದ ಒಂದು ಅಧ್ಯಯನ: ಲೇಖಕ ಶೇಷ ನವರತ್ನ ಅವರ ಕೃತಿ. ಭಾರತದಲ್ಲಿ ಶಾಸ್ತ್ರೀಯ ಸಂಗೀತದ ಬೇರು ಎಂದು ಸಾಮವೇದವನ್ನು ಪರಿಗಣಿಸಲಾಗುತ್ತದೆ. ನಾಲ್ಕು ಪ್ರಮುಖ ವೇದಗಳ ಪೈಕಿ ಸಾಮವೇದವು ಸಂಗೀತದ ಸ್ವರ-ಲಯ-ರಾಗಗಳ ಕುರಿತು ವಿವರಿಸುತ್ತಾದ್ದರಿಂದ ಇತರೆ ವೇದಗಳಿಗಿಂತ ಸಾಮವೇದವನ್ನು ಪ್ರತ್ಯೇಕ ಹಾಗೂ ವಿಶಿಷ್ಟ್ಯ ಎಂದು ಹೇಳಲಾಗುತ್ತದೆ. ಋಗ್ವೇದದ ಮಂತ್ರಗಳನ್ನು ಸ್ವರಬದ್ಧವಾಗಿ ಹಾಡುವಂತೆ ಮಾಡಿರುವುದೇ ಸಾಮವೇದ. ಪ್ರಕೃತಿಯಲ್ಲಿ ಲಯಬದ್ಧವಾದ ಒಂದು ಶಿಸ್ತು ಇದೆ. ಸ್ವರ ಇದೆ ಎಂದು ಹೆಚ್ಚಾಗಿ ತಿಳಿಸುವುದು ಸಾಮವೇದ. ಈ ವೇದದ ವೈಶಿಷ್ಟ್ಯ ಎಂದರೆ ನಾದ. ಅದನ್ನು ಹೇಗೆ ಉಚ್ಛರಿಸಿದರೂ ಭಗವಂತನಿಗೆ ಸೇರುತ್ತದೆ. ಸಂಗೀತದ ರಾಗಗಳು ಸಾಮವೇದದ ಜೀವಾಳ. ಈ ಕುರಿತು ವಿಸ್ತೃತ ಮಾಹಿತಿ ಒಳಗೊಂಡ ಕೃತಿ ಇದು.
©2024 Book Brahma Private Limited.