ಪ್ರಗತಿಪರ ಚಿಂತಕ ಯೋಗೇಶ್ ಮಾಸ್ಟರ್ ಅವರು ಗೌರಿ ಲಂಕೇಶ್ ಪತ್ರಿಕೆಯ ’ಪುರಾಣದ ಹೂರಣ’ ಎಂಬ ಅಂಕಣಕ್ಕೆ ಬರೆದ ಲೇಖನಗಳಲ್ಲಿ ಅಯ್ದ ಬರಹಗಳು ಈ ಪುಸ್ತಕದಲ್ಲಿದೆ. ಇಲ್ಲಿನ ಲೇಖನಗಳಲ್ಲಿನ ದನಿಯು ಒಂದು ನೆಲೆಗಟ್ಟಿನ ಅಲೋಚನೆಗಳಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚಿಂತನೆಗಳನ್ನು ನಡೆಸಲು ಪ್ರೇರೇಪಿಸುವಂತಿವೆ.
ನಮ್ಮ ಸಮಾಜದಲ್ಲಿ ಎರಡು ಬಗೆಯ ಜನರನ್ನು ನೋಡುತ್ತೇವೆ. ಒಬ್ಬರು ಪುರಾಣದ ಕಥೆಗಳನ್ನು ನೇರಾನೇರ ಒಪ್ಪಿಕೊಳ್ಳುವವರಾದರೆ, ಇನ್ನೊಬ್ಬರು ನಿರಾಕರಿಸುವವರು. ಆದರೆ ಎರಡರ ನಡುವಿನ ದಾರಿ ಎಂದರೆ ಪುರಾಣವನ್ನು ವಿಶ್ಲೇಷಿಸುವುದು. ಪುರಾಣಗಳೆಂಬ ರೂಪಕಗಳಲ್ಲಿ ಅಡಗಿರುವ ಗತಕಾಲದ ಸತ್ಯವನ್ನು ಗ್ರಹಿಸಲು ಯತ್ನಿಸುವುದು. ಈ ನಿಟ್ಟಿನಲ್ಲಿ ’ಪುರಾಣದ ರೂಪಕಗಳು’ ಕೃತಿ ಮುಖ್ಯವೆನಿಸುತ್ತದೆ.
’ಪುರಾಣದ ರೂಪಕಗಳು’, ’ದೇವರಾಗುವುದು, ದೇವರನ್ನು ಮಾಡುವುದು: ಒಂದು ತಂತ್ರ’, ’ಗಣಪತಿ ಬಂಡಾಯದ ದಳಪತಿ’, ’ವಿನಾಯಕ ಕೇಡಿನ ಅಪರಾವತಾರ’, ’ಕೃಷ್ಣನೂ ಒಬ್ಬ ಅಸುರ’, ’ಸನಾತನವಲ್ಲದ ಹಿಂದೂ ಧರ್ಮ’, ’ಭಾಗ್ಯದ ಲಕ್ಷ್ಮೀ ಬಾರಮ್ಮ’, ’ಗೊಡ್ಡು ಪುರಾಣದ ವೈಜ್ಞಾನಿಕ ಅಸ್ತ್ರ’, ’ಕುಂಡಲಿನಿ ಸಿಂಡ್ರೋಮ್’ ಮುಂತಾದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.