ಹಿರಿಯ ಲೇಖಕ ದೇಸಾಯಿ ದತ್ತಮೂರ್ತಿ ಅವರು ಖಲೀಲ್ ಗಿಬ್ರಾನ್ ನ ಉಕ್ತಿಗಳ ಸಂಗ್ರಹ ಕೃತಿ-ಪ್ರವಾದಿಯ ತೋಟ. ಖಲೀಲ್ ಗಿಬ್ರಾನನು ತನ್ನ ಅದ್ಭುತ ಕಲ್ಪನಾ ಸಾಮರ್ಥ್ಯದ ಶಬ್ದಗಳೊಂದಿಗಿರುವ ಸಾಹಿತ್ಯ ಸೃಷ್ಟಿಗೆ ಪ್ರಸಿದ್ಧ. ಮೂಲ ಲೆಬನಾನ್ ದೇಶದ ವಾಸಿಯಾದರೂ, ಅಮೆರಿಕದಲ್ಲಿ ನೆಲೆಸಿದ ನಂತರ ಆತನ ಬಹುತೇಕ ಸಾಹಿತ್ಯವಿರುವುದು ಇಂಗ್ಲಿಷಿನಲ್ಲಿ. ಈತನ ಸಾಹಿತ್ಯಕ ಕೃತಿಗಳಲ್ಲಿ ಬರುವ ಅಮೂಲ್ಯ ಉಕ್ತಿಗಳನ್ನು ಹಾಗೂ ತನ್ನ ಶಿಷ್ಯರಿಗೆ ನೀಡಿದ ಸಲಹೆ-ಉಪದೇಶ-ಸೂಚನೆಗಳನ್ನು ಸಂಗ್ರಹಿಸಿ ಒಂದೆಡೆ ನೀಡಿರುವ ಕೃತಿ. ಈತನ ಉಕ್ತಿಗಳು ಬದುಕಿನ ಕಲೆ ಹಾಗೂ ಪ್ರೀತಿಯನ್ನು ತಿಳಿಸಿಕೊಡುತ್ತವೆ. ಪ್ರೇಮ-ಕಾಮ-ದ್ವೇಷ ಹೀಗೆ ಮನೋಕಾಮನೆಗಳ ಸ್ವರೂಪ ಹಾಗೂ ಸ್ವಭಾವಗಳನ್ನೂ, ಸಾಮಾಜಿಕವಾಗಿರುವ ಮೂಢನಂಬಿಕೆ, ತಪ್ಪುಗ್ರಹಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ, ಮಾನವೀಯ ನೆಲೆಯಲ್ಲಿ ಹೇಳುವುದು ಓದುಗರಿಗೆ ಆಪ್ತವೆನಿಸುತ್ತವೆ.
©2024 Book Brahma Private Limited.