‘ಪೂರ್ವಾಪರ ಕಥನ’ ಸಾಮಯಿಕ ಲೇಖನ ಹಾಗೂ ಮುನ್ನುಡಿಗಳ ಕಟ್ಟು. ಕನ್ನಡ, ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಹುಶ್ರುತ ವಿದ್ವಾಂಸರ ಹಾಗೂ ಸಂಸ್ಕೃತಿ ಚಿಂತಕರು. ಅವರು ಕಳೆದ ಒಂದೆರಡು ವರ್ಷಗಳಿಂದ ದಿನಪತ್ರಿಕೆ, ಸಾಪ್ತಾಹಿಕ ಮತ್ತು ಮಾಸಪತ್ರಿಕೆಗಳಿಗೆ ಬರೆದ ಲೇಖನಗಳು, ಹಿರಿಯ ಕಿರಿಯ ಲೇಖಕರ, ಎಲೆಮರೆಯ ಸಾಧಕರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆ ಇಡುತ್ತಿರುವವರ ಪುಸ್ತಕಗಳಿಗೆ ಪ್ರೀತಿಯಿಂದ ಬರೆದ ಮುನ್ನುಡಿಗಳು ಪೂರ್ವಾಪರ ಕಥನವಾಗಿ ರೂಪುಗೊಂಡಿದೆ.
ಈ ಕೃತಿಯ ಮೊದಲ ಭಾಗ ಪೂರ್ವರೂಪದಲ್ಲಿ ಸಾಮಯಿಕ ಲೇಖನಗಳಿವೆ. ಎರಡನೆಯ ಭಾಗ ಉತ್ತರರೂಪದಲ್ಲಿ ಮುನ್ನುಡಿ ಬರೆಹಗಳಿವೆ. ಅನುಬಂಧದಲ್ಲಿ ಮಲ್ಲೇಪುರಂ ಅವರ ಸಂದರ್ಶನ ಮತ್ತು ಮತ್ತು ಪೂರಕ ಮಾಹಿತಿಗಳಿವೆ. ಈ ಕೃತಿಯಲ್ಲಿ ಸಾಹಿತ್ಯ, ಶಾಸ್ತ್ರ, ಸಂಗೀತ, ಯೋಗ ಹೀಗೆ ಹತ್ತಾರು ವಿಷಯಗಳ ಮೇಲಿನ ಬರೆಹಗಳುಂಟು. ಈ ಹೃದಯಕ್ಕೆ ಬೇಕಾಗುವ ಶಾಸ್ತ್ರಾನುಸಂಧಾನದಂತೆಯೇ ಹೃದಯಕ್ಕೆ ಬೇಕಾಗುವ ರಸಪರವಶತೆಯೂ ಉಂಟು ಈ ಸಾರಸ್ವತ ನದಿಯಲ್ಲಿ ಮಿಂದೇಳುವುದು ಒಂದು ಅಪೂರ್ವ ಅನುಭವ.
©2024 Book Brahma Private Limited.