ತಾವು ಬರೆಯುವುದಕ್ಕಿಂತಲೂ ಯುವಕರನ್ನು ಪ್ರೋತ್ಸಾಹಿಸಿ ಬೆಳೆಸುವುದಕ್ಕೆ ಹೆಚ್ಚು ಗಮನ ಕೊಟ್ಟಿದ್ದವರು ಚಿ. ಶ್ರೀನಿವಾಸರಾಜು ಅವರು. ಅದರ ನಡುವೆಯೂ ಹಲವಾರು ಮಹತ್ವದ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರು ಸಂಪಾದಿಸಿದ ಈ ಕೃತಿ ಕೈಲಾಸಂ ನೆನಪಿನ ಸಂಪುಟ ಒಂದು ಮಹತ್ವದ ಆಕರವಾಗಿ, ಕೈಲಾಸಂ ಬಗ್ಗೆ ಅಧ್ಯಯನ ಮಾಡಬಲ್ಲವರಿಗೆ, ಕುತೂಹಲಿಗಳಿಗೆ ನೆರವಾಗುವಂತಿದೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಕೈಲಾಸಂ ಜೀವನ ಹಾಗೂ ವ್ಯಕ್ತಿತ್ವವನ್ನು ಕಟ್ಟಿಕೊಡುವ ಬರಹಗಳಿವೆ. ಎರಡನೆಯ ಭಾಗವು ಅವರ ನಾಟಕಗಳಿಗೆ ಸಂಬಂಧಿಸಿದ್ಧಾಗಿದೆ. 2000ನೇ ಇಸವಿಯಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿಯ ಎರಡನೇ ಮುದ್ರಣ 2003ರಲ್ಲಿ ಬಂದಿದೆ.
©2024 Book Brahma Private Limited.