‘ಮಹಿಳಾ ಕಥಾಸಂಪದ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಪಾದಿತ ಮೂರು ತಲೆಮಾರಿನ ಕನ್ನಡ ಲೇಖಕಿಯರ ಉತ್ತಮ 108 ಕತೆಗಳಾಗಿವೆ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕೃತಿಯ ಬೆನ್ನುಡಿಯಲ್ಲಿ, ಇದೊಂದು ಅದ್ಭುತ ಸೃಜನಶೀಲ ಸಾಹಸ. ಆಧುನಿಕ ಕನ್ನಡ ಕಥೆಗಳು ಸಹಸ್ರಾರು ಇವೆ. ಅವುಗಳ ವೈವಿಧ್ಯಮಯವಾಗಿವೆ. ಅಂಥ ಸಾವಿರಾರು ಕತೆಗಳಿಂದ ನೂರಾ ಎಂಟು ಲೇಖಕಿಯರ ಪ್ರಾತಿನಿಧಿಕ ಕಥೆಗಳನ್ನು ಜೋಡಿಸುವುದೂ ಆಕೃತಿ ಕಟ್ಟುವುದೂ ಕಷ್ಟದ ಕೆಲಸವಾಗಿದ್ದು, ಇಲ್ಲಿಯ ಪ್ರತಿಯೊಂದು ಕಥೆಗಳಿಗೂ ರೇಖಾಚಿತ್ರ ರಚಿಸಿರುವುದು ಈ ಸಂಕಲನದ ವೈಶಿಷ್ಟ್ಯವಾಗಿದೆ. ಇಲ್ಲಿ ಆಯ್ದಿರುವ ಕಥೆಗಳು ಈವರೆಗೂ ಬಂದಂಥ ಸಂಕಲನಗಳಿಗಿಂತ ವಿಶಿಷ್ಟ ಬಗೆಯ ಜೋಡಣೆಯನ್ನು ಹೊಂದಿವೆ. ಕನ್ನಡ ಸಂಸ್ಕೃತಿಯ ಮಹಿಳಾ ಸಂವೇದನೆ ಇಲ್ಲಿ ಆಕರಗೊಂಡಿವೆ. ವಸ್ತು, ಶೈಲಿ, ಭಾಷೆ- ಈ ಎಲ್ಲಾ ದೃಷ್ಟಿಯಿಂದ ಈ ಸಂಪುಟವು ಓದಿಗೂ ಅಧ್ಯಯನಕ್ಕೂ ತೆರೆದ ಬಾಗಿಲಾಗಿದೆ ಎಂದು ಇಲ್ಲಿ ವಿಶ್ಲೇಷಿತವಾಗಿದೆ.
©2024 Book Brahma Private Limited.