ಲೇಖಕ ಜಿ. ಪಿ. ಬಸವರಾಜು ಅವರು ಸಂಪಾದಿಸಿದ ಕಥಾ ಸಂಕಲನ ಕೃತಿ ʻಲು ಷುನ್ ಕಥೆಗಳುʼ. ಪುಸ್ತಕದಿ ಶೀರ್ಷಿಕೆಯೇ ಸೂಚಿಸುವಂತೆ ಇದು ಚೀನಾದ ಊಳಿಗಮಾನ್ಯ ಶಕ್ತಿಗಳ ವಿರುದ್ದ ಯುದ್ದ ಸಾರಿದ ಲೇಖಕ ಹಾಗೂ ಕ್ರಾಂತಿಕಾರ ಲು ಷುನ್ ಬರೆದ ಕತೆಗಳ ಸಂಗ್ರಹವಾಗಿದೆ. ಈತ ಬರೆದ ಮೊದಲ ಕತೆ ʻಹುಚ್ಚನ ದಿನಚರಿʼ ಯು ಆಧುನಿಕ ಚೀನಾ ನಿರ್ಮಾಣದಲ್ಲಿ ಇತಿಹಾಸವಾಗಿ ಉಳಿದುಬಿಟ್ಟಿದ್ದು, ಚೀನೀ ಸಾಹಿತ್ಯಕ್ಕೆ ಹೊಸ ತಿರುವನ್ನೂ ಕೊಟ್ಟಿದೆ. ಚೀನಾವು ಸಾಮ್ರಾಜ್ಯಶಾಹಿಗಳ ಮುಷ್ಠಿಯಲ್ಲಿದ್ದಾಗ ಅಲ್ಲಿನ ಜನರ ಬದುಕು, ಸ್ವಾತಂತ್ರ್ಯ, ಆಸೆಗಳೆಲ್ಲವು ಛಿದ್ರವಾಗಿತ್ತು. ಇದನ್ನು ಕಣ್ಣೆದುರೇ ನೋಡಿದ ಹಾಗೂ ಅನುಭವಿಸಿದ ಲು ಷುನ್ ದಿಗ್ಭ್ರಮೆಗೊಂಡಿದ್ದ. ಬಳಿಕ ತುಳಿತದ ವಿವಿಧ ಸ್ವರೂಪಗಳನ್ನು ಅರ್ಥ ಮಾಡಿಕೊಂಡು, ಅದರ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವನತಿಯ ಕಾರಣಗಳನ್ನು ವಿವೇಚಿಸಿ ತನ್ನ ಮೊನಚಾದ ಬರವಣಿಗೆಯಿಂದ ವ್ಯಂಗ್ಯಮಾಡುತ್ತಾ ಊಳಿಗಮಾನ್ಯ ಪ್ರಭುಗಳನ್ನು ಬೆಚ್ಚಿಬೀಳಿಸಿದ. ಲು ಷುನ್ ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ ಗೇಲಿ, ಎಲ್ಲವೂ ಕಥನ ಶೈಲಿಯ ಭಾಗವಾಗಿ ಮುಂದೆ ಚೀನೀ ಸಾಹಿತ್ಯಲೋಕದಲ್ಲೂ ಪರಿಣಾಮಕಾರಿಯಾಗಿ ಪ್ರತಿಬಿಂಬಿಸತೊಡಗಿತು. ಹೀಗೆ ಇವರು ಬರೆದ ಅನೇಕ ಕತೆಗಳು ಈ ಕೃತಿಯಲ್ಲಿವೆ.
©2024 Book Brahma Private Limited.