ಬಿಜಾಪುರ-ವಿಜಯನಗರ ಕಾಲದಿಂದ ಹಿಡಿದು ತರುವಾಯದ ಕೆಲಕಾಲದವರೆಗಿನ ಹಂಡೆ ಪಾಳೆಯಗಾರರ (ಸಂಸ್ಥಾನಿಕರ) ಚರಿತ್ರೆಯನ್ನು ಈ ಕೈಪಿಯತ್ತುಗಳಲ್ಲಿ ನಿರೂಪಿಸಲಾಗಿದೆ.ಈ ಹಂಡೆ ಸಂಸ್ಥಾನದ ಪಾಳೆಯಗಾರರಿಗೆ " ಹಂಡೆ ವಜೀರ " ಎಂಬ ಬಿರುದು ಬಿಜಾಪುರ ಸುಲ್ತಾನರಿಂದ ಕೊಡಲ್ಪಟ್ಟಿತ್ತು. ಆ ಬಿರುದಿನ ಕಾರಣದಿಂದ ಮತ್ತು ಹಿಂದೆ ಈ ಮನೆತನದ ಚರಿತ್ರೆಯ ಆಕಾರಗಳು ಕಡಿಮೆ ಲಭ್ಯವಿದ್ದುದರಿಂದ ಅವರ ಜಾತಿಯ ಮೂಲ ಕೆಲವು ಅಸಂಗತ ಗ್ರಹಿಕೆಗಳಿಗೆ ಕಾರಣವಾಗಿತ್ತು.ಕೆಲವು ಬರಹಗಳಲ್ಲೂ ಅದು ಕಾ ಅಆಣಿಸಿಕೊಂಡಿತ್ತು. ಏಕೆಂದರೆ "ಹಂಡೆ" ಎಂಬ ಶಬ್ದ ಬಂದ ಕೂಡಲೇ ಅದು ಒಂದು ನಿರ್ದಿಷ್ಟ ಕೋಮಿಗೆ ಸೇರಿದ್ದೆಂದು ಹಿಂದೆ ತಿಳಿಯಲಾಗುತ್ತಿತ್ತು. ಆದರೆ ಈಚೆಗೆ ಶೋಧನೆ ಹೆಚ್ಚು ಪ್ರಮಾಣದಲ್ಲಿ ನಡೆದು, ಅಂಥ ತಿಳಿವಳಿಕೆ ಅಸಂಗತವೆಂಬ ಅಂಶ ಈಗ ಮನದಟ್ಟಾಗಿದೆ. ಹಂಡೆ ಎಂಬ ವಿಶೇಷಣ, ಹಂಡೆ ಜೋಯಿಸರು,,ಹಂಡೆ ಜೋಗಿಗಳು, ಹಂಡೆ ರಾವುತರು,ಹಂಡೆ ಕುರುಬರು, ಹಂಡೆ ಮುಸ್ಲಿಮರು,ಹಂಡೆ ಕೊರವರು- ಇಷ್ಟು ಜಾತಿ-ಜನಾಂಗಗಳವರಿಗೆ ಇದ್ದ ಸಂಗತಿ ಈಚೆಗೆ ತಿಳಿದುಬಂದಿದ್ದು ಅದು ಒಂದೇ ಕೋಮಿಗೆ ಇರುವಂಥದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಈ ಪಾಳೆಯಗಾರರು(ಸಂಸ್ಥಾನಿಕರು) ಬಿಜಾಪುರ-ವಿಜಯನಗರ ಕಾಲಕ್ಕಿಂತ ಹಿಂದಿನಿಂದ ಲಿಂಗಾಯತ ಅಥವಾ ವೀರಶೈವ ಧರ್ಮದವರಿದ್ದರೆಂದು ಈಗಾಗಲೇ 20 ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೋಧನೆ ಮಾಡಿದಾಗ ಈ ಮೇಲಿನ ಮಾತನ್ನು ಹೇಳುವುದು ಅಗತ್ಯವಿದೆ ಎನಿಸಿತು ಎಂದು ಚಿತ್ರದುರ್ಗದ ಖ್ಯಾತತ ಸಂಶೋಧಕರು ಡಾ.ಬಿ.ರಾಜಶೇಖರಪ್ಪ ಈ ಕೃತಿಯ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.