ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿದವರು ಡಾ.ಬಿ.ಎಸ್. ಗದ್ದಗಿಮಠ. ನಾಡು ಕಂಡ ಅಪರೂಪದ ಜಾನಪದ ವಿದ್ವಾಂಸರು. ಅವರ ಬದುಕು-ಬರಹದ ಕುರಿತು ನಡೆದ ಚಿಂತನ ಮಂಥನ ಮಾಲೆಯಲ್ಲಿ ವಿವಿಧ ಜಾನಪದ ತಜ್ಞರು ಮಂಡಿಸಿದ ಲೇಖನಗಳ ಸಂಕಲನ ಇದಾಗಿದೆ.
ಡಾ.ಎಂ.ಎಸ್. ಲಠ್ಠೆ ಅವರು ಮಂಡಿಸಿದ ಡಾ ಬಿ.ಎಸ್. ಗದ್ದಗಿಮಠ ಅವರ ಬದುಕು-ಬರಹ-ಸಾಧನೆ, ವೀರಣ್ಣ ದಂಡೆ ಅವರ ಗದ್ದಗಿಮಠ ಅವರ ಬಿಡಿ ಬರಹಗಳು, ಬಿ.ವಿ. ಮಲ್ಲಾಪುರ ಅವರು ಮಂಡಿಸಿದ ಬಿ.ಎಸ್. ಗದ್ದಗಿಮಠ ಅವರ ಸಂಪಾದಿತ ಕೃತಿಗಳು, ಕೆ.ಆರ್. ದುರ್ಗಾದಾಸ ಅವರ ಗದ್ದಿಗಿಮಠ ಅವರ ಕನ್ನಡ ಜಾನಪದ ಗೀತೆಗಳು ಮುಂತಾದ ಲೇಖನಗಳು ಇದರಲ್ಲಿವೆ.
©2024 Book Brahma Private Limited.