ಹಿಂದೂ ಮಕ್ಕಳಿಗೆ ಧರ್ಮ ಕುರಿತು ಏಕೆ ಅರಿವು ಮೂಡಿಸಬೇಕು ಎಂಬ ಜಿಜ್ಞಾಸೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಕೃತಿ-’ದೇವರು ನಂಬುವ’. ಈ ಕೃತಿಯು 1972ರಲ್ಲಿ ಮೊದಲ ಮುದ್ರಣ ಕಂಡಿತ್ತು. ಧರ್ಮ ಕಲಿಯಲು ಉತ್ಸಾಹಕ ಅಂಶವೆಂದರೆ ಅವರು ದೇವರಿದ್ದಾನೆ ಎಂದು ನಂಬುವುದು. ಈ ಕುರಿತು ಮಕ್ಕಳಿಗೆ ಹೇಳುವುದು ತಂದೆ-ತಾಯಿಯ ಕರ್ತವ್ಯ. ಇಂತಹ ವಿಷಯಗಳನ್ನು ಮನನ ಮಾಡಿಸುವುದರಿಂದ ಮಕ್ಕಳು ಸತ್ಪ್ರಜೆಗಳಾಗುತ್ತಾರೆ ಎಂಬ ಆಶಯದೊಂದಿಗೆ ಲೇಖಕರು ಕಥೆಗಳ ಮೂಲಕ ಧರ್ಮದ ಅಗತ್ಯ ಹಾಗೂ ಮಹತ್ವವವನ್ನು ಮನಗಾಣಿಸಲು ಇಲ್ಲಿ ಯತ್ನಿಸಿದ್ದಾರೆ.
©2024 Book Brahma Private Limited.