‘ಅಕಾರಾದಿಯಲ್ಲಿ ಕುವೆಂಪು ಕವನಗಳು’ ಎಚ್. ತಿಪ್ಪೇರುದ್ರಸ್ವಾಮಿ ಅವರ ಸಂಪಾದಕತ್ವದ ಕೃತಿಯಾಗಿದೆ. ಇದು ಹೆಸರೇ ಸೂಚಿಸುವಂತೆ ಕುವೆಂಪು ಅವರ ಕವನಗಳ ಅಕಾರಾದಿಯನ್ನು ಮುಂದಿಡುತ್ತದೆ. ಈ ಅಕಾರಾದಿಯನ್ನು ಎರಡು ಬಗೆಯಲ್ಲಿ ವರ್ಗಿಕರಿಸಿಕೊಂಡಿರುವುದು ಗಮನಾರ್ಹವಾಗಿದೆ. ಮೊದಲು, ಕವನಗಳ ಮೊದಲ ಸಾಲುಗಳನ್ನು ಅಕಾರಾದಿಯಲ್ಲಿ ಪಟ್ಟಿಮಾಡಿದೆ. ಎರಡನೆಯದಾಗಿ, ಕವನದ ಶೀರ್ಷಿಕೆಗಳನ್ನು ಅಕಾರಾದಿಯಲ್ಲಿ ಪಟ್ಟಿಮಾಡಲಾಗಿದೆ. ಇದರಲ್ಲಿ ಕುವೆಂಪು ಅವರ 1920 ರಿಂದ 1981ರ ವರೆಗೆ ಬರೆದ ಒಟ್ಟು 25 ಕವನ ಸಂಗ್ರಹಗಳ ಕವನಗಳೂ ಒಳಗೊಂಡಿವೆ. ಶಿಶುಗೀತೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿದ್ದು ಓದುಗರಿಗೆ, ಅಧ್ಯಯನಕಾರರಿಗೆ ಹೆಚ್ಚು ಅನುಕೂಲವಾಗಿದೆ, ಮೇಲುನೋಟಕ್ಕೆ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಈ ಕೃತಿ ಒಂದು ರೀತಿಯಲ್ಲಿ ಶುಷ್ಕವೆಂದೆನಿಸಬಹುದು. ಕೃತಿಯಿಂದ ಅನ್ಯವಾಗಿ ಬರೆದಾಗ ಮಾತ್ರ ಇಂಥ ಭಾವ ಮೂಡಲು ಸಾಧ್ಯ, ನೀರಿನ ಆಳದಲ್ಲಿ ಇಳಿದಾಗ ಅಲ್ಲಿ ಏನೆಲ್ಲವೂ ದೊರಕುತ್ತದ ಯಲ್ಲವೆ? ಹಾಗೆಯೇ ಈ ಅಕಾರಾದಿಯ ಕೃತಿಯ ಆಳಕ್ಕೆ ಇಳಿದರೆ ಇಲ್ಲಿಯ ನಿಮಗೆ ಕಡೆದಷ್ಟು ಬೆಣ್ಣೆ ಇದೆ, ಕಡೆಯದಿದ್ದರೆ ಏನೂ ಇಲ್ಲ ! ಇದಕ್ಕೆ ಬುದ್ಧಿಯ ಬೇಕು, ಭಾವವೂ ಬೇಕು, ಅರ್ಥೈಸುವಿಕೆಯೂ ಬೇಕು.
©2024 Book Brahma Private Limited.