ಡಾ.ಕಮಲಾ ಹಂಪನಾ ರವರ ಉಳಿದೆಲ್ಲ ಬರವಣಿಗೆಗಳದು ಒಂದು ತೂಕ ವಾದರೆ ಅವರ ಈ ಕೃತಿಯೇ ಇನ್ನೊಂದು ತೂಕ ದ್ದು. ತುರಂಗ ಭಾರತ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಬೃಹತ್ ಗಾತ್ರದ ಜನಪ್ರಿಯ ಕಾವ್ಯ.96 ಸಂಧಿಗಳು ಹಾಗೂ 4824 ಪದ್ಯಗಳು ಇರುವ ಇಷ್ಟು ದೊಡ್ಡ ಕಾವ್ಯ ವನ್ನು ರಚಿಸಿರುವ ಕವಿ ಪರಮ ದೇವ.ಈತ ಕುಮಾರ ವ್ಯಾಸ ನ ಪಟ್ಟ ಶಿಷ್ಯ.ಕುಮಾರ ವ್ಯಾಸ ಭಾಮಿನಿ ಷಟ್ಪದಿಯಲ್ಲಿ ಬರೆದುದನ್ನು ಈತ ವಾರ್ಧಕಕ್ಕೆ ತಿರುಗಿಸಿದ್ದಾನೆ.ಬಟ್ಟಲಿನಿಂದ ಕೊಳಗಕ್ಕೆ ಸುರಿದಿದ್ದಾನೆ. ತುರಂಗ ಭಾರತದ ಪ್ರಾಮುಖ್ಯವೆಲ್ಲ ಹರಳು ಗೊಂಡಿರುವುದು ಅದು ಕನ್ನಡದಲ್ಲಿ ರಚಿತವಾಗಿರುವ ಸಮಗ್ರ ಹದಿನೆಂಟು ಪರ್ವಗಳ ಪೂರ್ತಿ ಕಥೆ ಯಿರುವ ಏಕೈಕ ಕಾವ್ಯ ಎಂಬುದೇ ಆಗಿದೆ.ಪಂಪ, ರನ್ನ, ಕುಮಾರವ್ಯಾಸ ,ಲಕ್ಷ್ಮೀಶ , ಷಡ ಕ್ಷರಿ ,ರುದ್ರ ಭಟ್ಟ ,ಸದಾನಂದ ,ತಿಮ್ಮಣ, ಚಾಯಣ -ಇವರೆಲ್ಲ ವ್ಯಾಸ ಮಹಾಭಾರತದ ಪರ್ವಭಾಗ ಗಳನ್ನು ಬರೆದಿರುವರೇ ಹೊರತು ಸಮಗ್ರ ಭಾರತ ಕಥೆ ಹೇಳಿದವರಲ್ಲ.ಕನ್ನಡದಲ್ಲಿ ಸಮಗ್ರ ಭಾರತದ ಕಥೆಯನ್ನು ಆಮೂಲಾಗ್ರವಾಗಿ ಬರೆದ ಶ್ರೇಯಸ್ಸು ಪರಮದೇವನಿಗೆ ಸಲ್ಲುತ್ತದೆ. ವಾಸ್ತವವಾಗಿ ಹಂಪನಾ ರವರ ಇಡೀ ಮಹಾಪ್ರಬಂಧವೇ ಒಂದು ತೌಲನಿಕ ಅಧ್ಯಯನವಾಗಿದೆ.
ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ...
READ MORE