ʼತುಳುನಾಡುʼ ಒಂದು ಸಂಶೋಧನಾತ್ಮಕ ಗ್ರಂಥ. ಲೇಖಕ ಪಿ. ಗುರುರಾಜ್ ಭಟ್ ಅವರಿಂದ ರಚಿತವಾಗಿದೆ. ಈ ಕೃತಿಯಲ್ಲಿ ತುಳುವರೆಂದರೆ ಯಾರು, ತುಳುವರ ಹುಟ್ಟು ಬಗೆಗಿನ ಮಾಹಿತಿಗಳು, ಸ್ವರನಾಮಗಳನ್ನು ಹೇಳುವ ತುಳುನಾಡಿನ ಕಥೆಯನ್ನು ಕೃತಿಯು ಸವಿಸ್ತಾರವಾಗಿ ಹೇಳುತ್ತದೆ.
ತುಳುನಾಡಿಗೆ ಸಂಬಂಧಿಸಿದ ಕೆಲವು ಮುಖ್ಯವಾದ ದಾಖಲೆಗಳನ್ನು ಒಳಗೊಂಡಿದೆ. ದಕ್ಷಿಣ ಕನ್ನಡದಲ್ಲಿ ತುಳುವರ ವಿಚಾರಧಾರೆಗಳು ಮತ್ತು ಬಂಟ ಸಮುದಾಯದ ಅಚಾರ -ವಿಚಾರಗಳ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ತುಳುನಾಡಿನ ಭೌಗೋಳಿಕ ಸ್ಥಿತಿಗತಿ, ತುಳುನಾಡಿನ ರಾಜಕೀಯ ಚರಿತ್ರೆ,ತುಳುನಾಡಿನ ದೇವಾಲಯಗಳ ಇತಿಹಾಸ ಮತ್ತು ತುಳುನಾಡಿನ ಕಲೆಗಳ ಬಗೆಗೆ ಕೃತಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.
©2024 Book Brahma Private Limited.