ಸ್ಥಳನಾಮ ಹಾಗು ಕುಟುಂಬನಾಮಗಳ ಕುರಿತ ಅಧ್ಯಯನ ಅತ್ಯಂತ ಕುತೂಹಲಕಾರಿ. ಈ ಹಿನ್ನೆಲೆಯಲ್ಲಿ, ಪ್ರೊ.ಬಿ.ಎಫ್. ಕಲ್ಲಣ್ಣನವರು ರಚಿಸಿದ ಅಧ್ಯಯನ ಯೋಗ್ಯ ಕೃತಿ-ಕುಟುಂಬ ನಾಮಗಳು ಸ್ವರೂಪ ಮತ್ತು ವಿಶ್ಲೇಷಣೆ. "ನಡೆದಷ್ಟಿದೆ ನೆಲ" ಎಂಬ ವರಕವಿ ಬೇಂದ್ರೆ ಅವರ ಮಾತಿನಂತೆ ಸ್ಥಳನಾಮ ಹಾಗು ಕುಟುಂಬನಾಮಗಳ ಅಧ್ಯಯನ ಕೂಡ ಮಾಡಿದಷ್ಟು ಇದೆ. ಕುಟುಂಬದ ಅಡ್ಡ ಹೆಸರು ಆ ಮನೆತನದ ಸಮಗ್ರ ಇತಿಹಾಸವನ್ನೇ ತೆರೆದಿಡುತ್ತದೆ. ಕುಟುಂಬನಾಮಗಳನ್ನು ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ. ಈ ದೃಷ್ಟಿಯಿಂದ ಈ ಕೃತಿಯು ಹೆಚ್ಚು ಮಹತ್ವ ಪಡೆದಿದೆ ಹಾಗೂ ಮೌಲಿಕವಾಗಿದೆ. ಕುಟುಂಬನಾಮಗಳು ಸದರಿ ಮನೆತನಕ್ಕೆ ಹೇಗೆ ಬರುತ್ತದೆ ಹಾಗೂ ಕಾಲ-ಕಾಲಕ್ಕೆ ಹೇಗೆ ಬದಲಾವಣೆ ಹೊಂದುತ್ತದೆ ಎಂಬುದನ್ನು ಈ ಕೃತಿಯಲ್ಲಿ ಸವಿಸ್ತಾರವಾಗಿ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ
ಪ್ರೊ. ಬಿ. ಎಫ್. ಕಲ್ಲಣ್ಣವರ, ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದವರು. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ, ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಗುಲ್ಬರ್ಗಾ ಸ್ನಾತ್ತಕೋತ್ತರ ಕೇಂದ್ರದಿಂದ ಎ೦.ಎ. ಪದವಿ ಪಡೆದರು. ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ, ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ...
READ MORE