’ಹಳೇಪೈಕರು : ಒಂದು ಅಧ್ಯಯನ’ ಕೃತಿಯು ಉತ್ತರ ಕನ್ನಡದ ನಾಮಧಾರಿ ಸಮುದಾಯದ ಕುಲಮೂಲ ಕುರಿತು ಬರೆದ ಅಧ್ಯಯನಪೂರ್ಣ ಕೃತಿ. ನಾಮಧಾರಿ ಸಮುದಾಯದ ಚಾರಿತ್ರಿಕ ಹಿನ್ನೆಲೆಯನ್ನು ಕಟ್ಟಿಕೊಡುವುದರೊಂದಿಗೆ, ಅದರ ಸಾಮಾಜಿಕ ಮತ್ತು ರಾಜಕೀಯ ಆಯಾಮದ ಬಗ್ಗೆಯೂ ಈ ಕೃತಿ ವಿವರಿಸುತ್ತದೆ. ಉತ್ತರ ಕನ್ನಡದ ರೈತ ಹೋರಾಟದಲ್ಲಿಯೂ ಈ ಸಮುದಾಯ ತೊಡಗಿಸಿಕೊಂಡ ಬಗೆಯನ್ನು ಲೇಖಕ ಉಮೇಶ ನಾಯ್ಕ ವಿವರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಉಮೇಶ ನಾಯ್ಕ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು ಗಮನ ಸೆಳೆದವರು. ಬರವಣಿಗೆ, ಗಾಯನ, ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಮತ್ತು ತಬಲಾ ವಾದನ), ರಂಗಭೂಮಿ ಮತ್ತು ಸಾಹಿತ್ಯಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ವೃತ್ತಿಯಲ್ಲಿ ಉಪನ್ಯಾಸಕರು. ಕವಿತೆ ಅವರ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾಗಿದ್ದರೂ, ಕವಿತೆಯೇತರ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಉಮೇಶ ನಾಯ್ಕ, ಉತ್ತರ ಕನ್ನಡದ ನಾಮಧಾರಿ ಸಮಾಜದ ಬಗೆಗೂ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ. ಉತ್ತರ ಕನ್ನಡದ ರೈತಹೋರಾಟದ ಹಿನ್ನೆಲೆಯೊಡನೆ ತಮ್ಮ ತಂದೆಯವರ ಕುರಿತು ಅವರು ಬರೆದಿರುವ ಕೃತಿ ಒಂದು ಕಾಲಘಟ್ಟದ ಸಾಂಸ್ಕೃತಿಕ ...
READ MORE