ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ-2 ಎ.ಬಿ. ವಗ್ಗರ ಅವರ ಸಂಪಾದಿತ ಕೃತಿಯಾಗಿದೆ. ಬ್ರಿಟೀಷ್ ದಾಖಲೆಗಳು ಕಿತ್ತೂರು ಸಂಸ್ಥಾನ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಮತ್ತು ಆ ನಂತರದ ದಂಗೆಗಳನ್ನು ಹೇಗೆ ಕಾಣುತ್ತವೆ ಎಂಬುದನ್ನು ತಿಳಿಯಲು ಈ ಆಕರಗಳು ಅಗತ್ಯವಾಗಿದ್ದ ಕಾರಣ ಇವುಗಳ ಶೋಧನೆಗೆ ತೊಡಗಬೇಕಾದ ಜರೂರು ಇತ್ತು. ಇತಿಹಾಸಕಾರರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಲಭ್ಯವಿದ್ದ ಆಕರಗಳನ್ನು ಬಳಸಿಕೊಂಡಿದ್ದಾರೆಂಬುದು ನಿಜ. ಆದರೆ ಸಮಗ್ರ ದಾಖಲೆಗಳ ಶೋಧ ಈವರೆಗೂ ಆಗಿರಲಿಲ್ಲ. ಈಗ ಇವು ನಮ್ಮ ಸಂಶೋಧಕರು ಮತ್ತು ಇತಿಹಾಸಕಾರರಿಗೆ ಲಭ್ಯವಾದಲ್ಲಿ ಇತಿಹಾಸದ ಪುನರಚನೆಗೆ ಮತ್ತು ವ್ಯಾಖ್ಯಾನಿಸುವಿಕೆಗೆ ನೆರವಾಗುತ್ತವೆ. ಈ ಆಕರಗಳು ವಸಾಹತುಶಾಹಿಯು ದೇಶೀಯ ಸಂಗ್ರಾಮವನ್ನು ಕಾಣುವ ಬಗೆಯನ್ನು ಕಟ್ಟಿಕೊಡುತ್ತವೆ. ಆಗಿನ ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಚಿತ್ರಣವೂ ಇಲ್ಲಿ ದೊರೆಯುತ್ತದೆ ಎನ್ನುತ್ತಾರೆ ಪ್ರೊ. ಮಲ್ಲಿಕಾರ್ಜುನ ಹಿರೇಮಠ.
ಡಾ. ಎ.ಬಿ. ವಗ್ಗರ ಅವರು ಎಂ.ಎ, ಎಂಫಿಲ್, ಪಿಎಚ್ ಡಿ, ಹಾಗೂ ಎಪಿಗ್ರಫಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಎಸ್.ಎಸ್. ಪ್ರಥಮ ದರ್ಜೆ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮದುರ್ಗ ಸಂಸ್ಥಾನ ವಿಮೋಚನಾ ಹೋರಾಟ ಕೃತಿ ಬರೆದಿದ್ದು, 35 ಸಂಶೋಧನಾತ್ಮಕ ಲೇಖನಗಳು ಹಾಗೂ ಹಲವು ವಿಷಯಗಳಿಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿದ್ದಾರೆ. ಐಸಿಎಚ್ ಆರ್ ನವದೆಹಲಿ ಪ್ರಕಟಿಸಿದ ‘ಹುತಾತ್ಮರ ನಿಘಂಟು: ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಟ (1857-1947)-ಕರ್ನಾಟಕ ಪ್ರದೇಶ, ಯೋಜನೆಗೆ ಸಹಾಯಕ ಸಂಶೋಧಕರಾಗಿ ಕಾರ್ಯ ...
READ MORE