ಡಾ. ವಾಸಯ್ಯ ಎನ್ ಅವರು ಸಂಶೋಧನಾತ್ಮಕವಾಗಿ ಬರೆದ ಕೃತಿ-ಹೊಸಗನ್ನಡ ಕಾವ್ಯದಲ್ಲಿ ಮಳೆ. ಮಳೆ ಎಂಬ ಪರಿಕಲ್ಪನೆಯನ್ನು ಕವಿಗಳು, ಚಿಂತಕರು, ಕಥೆಗಾರರು, ಪ್ರಬಧಂಕಾರರು ಹೀಗೆ ವೈವಿಧ್ಯಮಯವಾಗಿ ವರ್ಣಿಸಿದ್ದಾರೆ. ಮಳೆ ಇಲ್ಲದಿರೆ ಭೂಮಿ ಬರಡಷ್ಟೇ ಅಲ್ಲ; ಜೀವ-ಸಸ್ಯ ಸಂಕುಲವೆಲ್ಲವೂ ಬರಡು. ಅದಕ್ಕೆಂದೇ, ನೀರಿಗೆ ಜೀವದ್ರವ್ಯ ಎಂದು ಕರೆಯಲಾಗುತ್ತಿದೆ. ಇಂತಹ ಮಳೆಯನ್ನು ಕುರಿತು ಹೊಸಗನ್ನಡ ಕಾವ್ಯದಲ್ಲಿ ವರ್ಣಿತವಾಗಿರುವ ‘ಮಳೆ’ಯನ್ನು ಅಧ್ಯಯನ ವಸ್ತುವಾಗಿಸಿಕೊಂಡು, ಓದುಗರ ಜ್ಞಾನ ಕ್ಷಿತಿಜದ ಸಾಧ್ಯತೆಗಳನ್ನು ವಿಸ್ತರಿಸುವ ಕೃತಿ ಇದು.
ಡಾ. ವಾಸಯ್ಯ ಎನ್ ಅವರು ವಿಮರ್ಶಕರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ (2017) ಬಹುಮಾನ ದೊರೆತಿದೆ. ಕೃತಿಗಳು: ತುಂತುರು ಹನಿ, ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ, ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ ಅಧ್ಯಯನ, ಆರ್ತ ಧ್ವನಿ, ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ, ಹೊಸಗನ್ನಡ ಕಾವ್ಯದಲ್ಲಿ ಮಳೆ, ಕವಿಯ ಮನದಲ್ಲಿ ಬುದ್ಧ,, ಸಂಶೋಧನಾ ಸಿರಿ. ...
READ MORE