‘ಸುವರ್ಣ ಸಂಗ್ರಹ’ ಕೃತಿಯ ಪ್ರಮುಖ ಶೀರ್ಷಿಕೆಗೆ ‘ಭಾರತೀಯ ಅಡುಗೆಗಳು’ ಎಂಬ ಉಪಶೀರ್ಷಿಕೆ ಇದೆ. ಲೇಖಕಿ ಸುವರ್ಣಾ ವಿ. ಕಾಮತ್ ಅವರ ಅಡುಗೆ ಕುರಿತ ಬರವಣಿಗೆಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಾವು ಏನಾಗಿದ್ದೇವೆ ಎನ್ನುವುದು ನಮ್ಮ ಆಹಾರದ ಮೇಲೆ ಅವಲಂಬಿಸಿವೆ. ಶುದ್ಧ ಸಾತ್ವಿಕ ಆಹಾರದಿಂದ ದೇಹ ಹಾಗೂ ಮನಸ್ಸುಗಳೆರಡೂ ನೆಮ್ಮದಿಯನ್ನು ಪಡೆಯುತ್ತವೆ. ಪುರಾತನ ಕಾಲದಿಂದಲೂ ಮಾನವನು ತನ್ನ ರುಚಿ, ಅಭಿರುಚಿಗೆ ತಕ್ಕಂತೆ ಅಡುಗೆಯ ವಿಧಾನವನ್ನು ಆಗಾಗ ಪರಿಷ್ಕರಿಸುತ್ತಾ, ಹೊಸ ಶೋಧನೆಗಳನ್ನು ಮಾಡುತ್ತಾ, ವಿಧವಿಧದ ಭಕ್ಷ್ಯ ಭೋಜ್ಯಗಳನ್ನು ಕಾಲಕಾಲಕ್ಕೆ ಸೇರಿಸುತ್ತ ಬಂದಿದ್ದಾನೆ. ಹಾಗಾಗಿ, ಅಡುಗೆಯು ಒಂದು ಅಧ್ಯಯನದ ವಿಷಯವಾಗಿ ಪರಿವರ್ತಿತವಾಗಿದೆ’ ಎಂದಿದೆ.
©2024 Book Brahma Private Limited.