`ಕನಕದಾಸರ ವರಮೋಹನತರಂಗಿಣಿ ಸಂಪುಟ-2’ ವ್ಯಾಖ್ಯಾನ-ವಿಶ್ಲೇಷಣೆ ಕೃತಿಯು ಎಮ್.ಆರ್. ಸತ್ಯನಾರಾಯಣ್ ಅವರ ಸುಮಾರು 2799 ಸಾಂಗತ್ಯಪದಗಳ ಮಹಾನ್ ಕಾವ್ಯವಾಗಿದೆ. ವಿದ್ವಾಂಸರು ಹಾಗೂ ವಿಮರ್ಶಕರು ಇದುವರೆಗೆ ಮನಮೋಹಕವಾದ ಶೃಂಗಾರ ಕಾವ್ಯವೆಂದು ವರ್ಣಿಸಿ ವ್ಯಾಖ್ಯಾನಿಸಿದ ಕಾವ್ಯಶಿಲ್ಪ. ಕನಕರದು ಕಾವ್ಯಮೀಮಾಂಸೆಯಲ್ಲಿ ಅನೇಕ ಮೀಮಾಂಸಕರು ಹೇಳಿದ ದೈದವತ್ತ ಪ್ರತಿಭೆ. ಅದನ್ನು ಕನಕರು ತಮ್ಮ ಈ ಸುದೀರ್ಘ ಕಾವ್ಯಕೃತಿಯಲ್ಲಿ ಮತ್ತೆಮತ್ತೆ ನೆನಪಿಸಿಕೊಳ್ಳುತ್ತಾರೆ. ನೆನಪಿಸುತ್ತಾರೆ. ತಾವು ಕೇವಲ ಕೃತಿಯನ್ನು ಹೇಳಿದರೆಂದೂ ನಿಜಕ್ಕೂ ಕಾವ್ಯದ ಕರ್ತೃ ಕಾಗಿನೆಲೆಯೆ ಆದಿಕೇಶವನೆಂದೂ ಸ್ಪಷ್ಟಪಡಿಸುತ್ತಾರೆ. ತಾವು ವಡಿ, ಪ್ರಾಸ, ಗಣನೇಮ, ಛಂದಸ್ಸು, ವ್ಯಾಕರಣಾದಿಗಳನ್ನು ತಿಳಿಯದ ಮೂಢನೆಂದೂ, ತಾನೊಂದು ಗುಬ್ಬಿಯೆಂದೂ , ತಾನೊಂದು ಗೀಜಗವೆಂದೂ, ತಾವು ಕಟ್ಟಿದ ಈ ಗೂಡನ್ನು ಕೆಡಹುಬಾರದೆಂದೂ ವಿನಮ್ರಮೂರ್ತಿಯಾಗಿ ಕಾವ್ಯವನ್ನು ಆರಂಭಿಸುವ ಕನಕರು ಕೊನೆಯತನಕ ತಮ್ಮ ಕಾವ್ಯಪ್ರತಿಭೆಯ ತೆಪ್ಪದಲ್ಲಿ ಈ ತರಂಗಿಣಿಯನ್ನು ದಾಟಿದ್ದಾರೆ. ಈ ಕಾವ್ಯತರಂಗಿಣಿಯು ಅನೇಕರ ಪ್ರಕಾರ ಶೃಂಗಾರರಸಪೂರ್ಣ. ಆದರೆ ನಿಜಕ್ಕೂ ಇಲ್ಲಿ ಅಧ್ಯಾತ್ಮದ ಹರಿವಿದೆ.
ಲೇಖಕ ಎಮ್.ಆರ್. ಸತ್ಯನಾರಾಯಣ್ ಅವರು ಮೂಲತಃ ಶಿವಮೊಗ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಿಂದ ಕನಕದಾಸರ ಕುರಿತ ಮೂರು ಸಂಪುಟಗಳ ಸಂಶೋಧನೆಯನ್ನು ಮಾಡಿರುತ್ತಾರೆ. ಕೃತಿಗಳು: ಕನಕದಾಸರ ವರಮೋಹನತರಂಗಿಣಿ ಸಂಪುಟ-1, ಕನಕದಾಸರ ವರಮೋಹನತರಂಗಿಣಿ ಸಂಪುಟ-2, ಕನಕದಾಸರ ವರಮೋಹನತರಂಗಿಣಿ ಸಂಪುಟ-3 ...
READ MORE