‘ಸಿದ್ದರಾಮನ ಸೊನ್ನಲಿಗೆ’ ಜಿ. ಎನ್. ಉಪಾಧ್ಯ ಅವರ ಸಾಂಸ್ಕೃತಿಕ ಅಧ್ಯಯನವಾಗಿದೆ. ಸಿದ್ಧರಾಮನ ಸೊನ್ನಲಿಗೆ ಗ್ರಂಥವೊಂದು ಮಹತ್ವದ ಸಂಶೋಧನ ಕೃತಿಯಾಗಿದೆ. ಚಿಕ್ಕಹಳ್ಳಿಯಾಗಿದ್ದ ಸೊನ್ನಲಿಗೆಯನ್ನು ದೇವಾಲಯ ನಿರ್ಮಾಣ ಹಾಗೂ ಸಾಮಾಜಿಕ ಧಾರ್ಮಿಕ ಕಾರ್ಯಗಳ ಮೂಲಕ ಅತ್ಯಂತ ಶ್ರಮಪಟ್ಟು ಹೆಸರುವಾಸಿಯಾಗುವಂತೆ ಮಾಡಿದವನು ಸಿದ್ಧರಾಮ ಶಿವಯೋಗಿ, ಈ ಕೃತಿಯು ಈ ಊರಿನ ಏಳುಬೀಳಿನ ಕೃತಿಯೂ ಆಗಿದೆ.
ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...
READ MOREಹೊಸತು- ನವೆಂಬರ್ -2003
ಸಿದ್ಧರಾಮನ ಸೊನ್ನಲಿಗೆ ಗ್ರಂಥವೊಂದು ಮಹತ್ವದ ಸಂಶೋಧನ ಕೃತಿಯಾಗಿದೆ. ಚಿಕ್ಕಹಳ್ಳಿಯಾಗಿದ್ದ ಸೊನ್ನಲಿಗೆ ಯನ್ನು ದೇವಾಲಯ ನಿರ್ಮಾಣ ಹಾಗೂ ಸಾಮಾಜಿಕ ಧಾರ್ಮಿಕ ಕಾರ್ಯಗಳ ಮೂಲಕ ಅತ್ಯಂತ ಶ್ರಮಪಟ್ಟು ಹೆಸರುವಾಸಿಯಾಗುವಂತೆ ಮಾಡಿದವನು ಸಿದ್ಧರಾಮ ಶಿವಯೋಗಿ, ಈ ಕೃತಿಯು ಈ ಊರಿನ ಏಳುಬೀಳಿನ ಕೃತಿಯೂ ಆಗಿದೆ. ಸೊನ್ನಲಿಗೆಗೆ ಸಂಬಂಧಿಸಿದ ಹಲವಾರು ಶಾಸನಗಳೂ ಲಭ್ಯವಿದ್ದು ಈ ಪುಸ್ತಕದಲ್ಲಿ ಅವುಗಳ ಬಗ್ಗೆ ಧಾರಾಳವಾಗಿ ಮಾಹಿತಿ ಕೊಡಲಾಗಿದೆ. ಶಾಸನಗಳೇ ಇಲ್ಲಿನ ಕಥೆಗಳನ್ನು ಹೇಳುತ್ತಿವೆ ಎನ್ನಬಹುದು.