ಕರ್ನಾಟಕ ಶಾಸನಾಧ್ಯಯನ ವಾಗ್ವಾದಗಳನ್ನು ಕನ್ನಡ ಸಂಶೋಧನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆದಷ್ಟೂ ಸಮಗ್ರವಾಗಿ ಕಟ್ಟಿಕೊಟ್ಟಿರುವ ಕೃತಿಯಿದು. ಇದು ಸಂಶೋಧನ ಮಹಾಪ್ರಬಂಧವಾಗಿದೆ. ಇದುವರೆಗೆ ಕರ್ನಾಟಕದ ಶಾಸನಗಳ ಬಗ್ಗೆ ನಡೆದಿರುವ ಎಲ್ಲಾ ಮುಖ್ಯವಾದ ವಾಗ್ವಾದಗಳನ್ನು ಈ ಕೃತಿ ವಿಮರ್ಶಾತ್ಮಕವಾಗಿ ಗುರುತಿಸುತ್ತದೆ. ಕನ್ನಡ ಸಂಶೋಧನೆಯ ಬಹುಮುಖ್ಯ ಆಸಕ್ತಿಗಳೇನು ಎಂದು ಈ ಕೃತಿಯ ಮೂಲಕ ಕಂಡುಕೊಳ್ಳಲಾಗಿದೆ. ಅರಸುಮನೆತನಗಳ ಮೂಲಚೂಲ, ಭಾಷೆ ಮತ್ತು ಅರ್ಥ, ಸ್ಥಳ ಮತ್ತು ಸ್ಥಳನಾಮ, ವ್ಯಕ್ತಿ ಮತ್ತು ಸಂಬಂಧಗಳು, ಕಾಲ ಮತ್ತು ಕಾರಣ ಎಂಬ ಅಧ್ಯಾಯಗಳಲ್ಲಿ ಕನ್ನಡ ಸಂಶೋಧನ ಪ್ರಪಂಚವು ತಳೆದಿರುವ ನಿಲುವುಗಳನ್ನು ಸಂಶೋಧನಾ ಸಾತತ್ಯವನ್ನು, ಅಧ್ಯಯನದ ಕ್ರಮಗಳನ್ನು ಇಲ್ಲಿ ಮುನ್ನೆಲೆಗೆ ತರುವಂತೆ ಸಂಶೋಧನೆಯನ್ನು ಮಾಡಲಾಗಿದೆ.
©2024 Book Brahma Private Limited.