‘ಮೈಸೂರು ನಗರದ ಅಶೋಕಪುರಂ’ ವಾಸುದೇವಮೂರ್ತಿ ಅವರ ಒಂದು ಜಾನಪದೀಯ ಅಧ್ಯಯನವಾಗಿದೆ. ಹಳೆಯ ಹಾಗೂ ಹೊಸ ತಲೆಮಾರುಗಳ ಕೊಂಡಿಯಂತೆ ಕಾಣುತ್ತಿರುವ ಈ ಚಿಕ್ಕ ಪ್ರದೇಶವೊಂದನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿ ಸವಿಸ್ತಾರ ಕ್ಷೇತ್ರ ಕಾರ್ಯ ನಡೆಸಿದ್ದು ಜಾನಪದ ನಂಬಿಕೆಗಳ ಇತಿಹಾಸವೊಂದನ್ನು ಪರಿಚಯಿಸಿದ್ದಾರೆ.
ಹೊಸತು - ಮಾರ್ಚ್ -2005
ಅಶೋಕಪುರಂ ಮೈಸೂರು ನಗರದ ಮಧ್ಯೆ ಇರುವ ಹಿಂದೆ ತೀರ ಹಿಂದುಳಿದ ವರ್ಗ ವಾಸಿಸುತ್ತಿದ್ದ ಪ್ರದೇಶ. ಇತ್ತೀಚಿನ ನವನಾಗರಿಕತೆಗೆ ಸ್ವಲ್ಪ ಸ್ವಲ್ಪವೇ ತೆರೆದುಕೊಂಡರೂ ಇನ್ನೂ ಅನೇಕರು ತಮ್ಮ ಕುಲಾಚರಣೆ ಆಚಾರ-ವಿಚಾರಗಳನ್ನು ಸುಲಭದಲ್ಲಿ ಬಿಟ್ಟುಕೊಡಲು ಸಿದ್ಧರಿಲ್ಲ. ಹಳೆಯ ಹಾಗೂ ಹೊಸ ತಲೆಮಾರುಗಳ ಕೊಂಡಿಯಂತೆ ಕಾಣುತ್ತಿರುವ ಈ ಚಿಕ್ಕ ಪ್ರದೇಶವೊಂದನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿ ಸವಿಸ್ತಾರ ಕ್ಷೇತ್ರ ಕಾರ್ಯ ನಡೆಸಿದ್ದು ಜಾನಪದ ನಂಬಿಕೆಗಳ ಇತಿಹಾಸವೊಂದನ್ನು ಪರಿಚಯಿಸಿದ್ದಾರೆ. ಪ್ರಾಚೀನ ಕಾಲದ ಹೊಲಗೇರಿಯೆಂದು ಗುರುತಿಸಲಾಗಿದ್ದ ಈ ಪ್ರದೇಶಕ್ಕೆ ಕಳೆದ ಶತಮಾನದಲ್ಲಷ್ಟೇ ಅಶೋಕಪುರಂ ಎಂಬ ನಾಮಕರಣವಾಗಿದ್ದು ಅಲ್ಲಿನ ಜನರ ಆಮೂಲಾಗ್ರ ಪರಿಚಯವನ್ನೇ ಪ್ರಬಂಧದಲ್ಲಿ ಮಂಡಿಸಲಾಗಿದೆ. ಒಂದು ಜನಾಂಗದ ಹಾಗೂ ಗ್ರಾಮೀಣ ಬದುಕಿನ ಪರಿಚಯ.
©2024 Book Brahma Private Limited.