ಲೇಖಕ ಡಾ. ಟಿ. ವಿ. ವೆಂಕಟಾಚಲ ಶಾಸ್ರ್ತಿ ಅವರ ಇತಿಹಾಸ ವಿಮರ್ಶೆ ಕೃತಿ ʼ ಚಿತ್ರಕಾವ್ಯʼ. ಪುಸ್ತಕವು ಚಿತ್ರಕಾವ್ಯದ ಬಗ್ಗೆ ಹೇಳುತ್ತಾ ಹೋಗುತ್ತದೆ . ಇದೊಂದು ಕಾವ್ಯಪದ್ಧತಿಯಾಗಿದೆ. ಇಲ್ಲಿ ಕಾವ್ಯವನ್ನು ವಿಶ್ಲೇಷಿಸಿರುವ 'ಚಿತ್ರ' ಎಂಬ ಶಬ್ದದ ಅರ್ಥವೇನು? ಈ ಪ್ರಶ್ನೆಗೆ ದೊರೆಯುವ ಉತ್ತರ, ಆ ಹಲವು ಅರ್ಥಗಳಲ್ಲಿ ಯಾವುದನ್ನು ಗ್ರಹಿಸಬೇಕು ಎಂಬುದನ್ನು ಚಿಂತಿಸಿ, ಗ್ರಹಿಸುವುದರಲ್ಲಿದೆ. ಅಂತಹ ಅರ್ಥಗಳಲ್ಲಿ 'ಪ್ರತೀಕ', 'ವಿಸ್ಮಯಜ್ಜನಕ' ಎಂಬವು ಗಮನಿಸಬೇಕಾದವು. ಕಾವ್ಯದ ಒಂದು ಪ್ರತೀಕ, ಅನುಕರಣೆ, ಚಿತ್ರಪಟದ ಸಾದೃಶ್ಯವುಳ್ಳ ರಚನೆ ಎಂಬುದಾಗಿ ತಿಳಿಯುವಂತೆ “ಏಕಾವಲಿ', 'ಸರಸ್ವತೀ ಕಂಠಾಭರಣಗಳಲ್ಲಿ ಸೂಚನೆಗಳು ದೊರೆಯುತ್ತವೆ. ನಿಜಕಾವ್ಯದಿಂದ ದೊರೆಯುವ 'ಆನಂದ' ಇಲ್ಲಿ ದೊರೆಯುವುದಿಲ್ಲ, 'ವಿಸ್ಮಯ' ಉಂಟಾಗುತ್ತದೆಯೆನ್ನುವುದು ಹೆಚ್ಚು ಪ್ರಚಲಿತವಾದ ಅರ್ಥ, ವಿಸ್ಮಯಕೃತ್ ವೃತ್ತಾದಿವಶಾತ್', ಗೌತುಕವಿಶೇಷಕಾರಿ ಚಿತ್ರಮ್', ಆಶ್ಚರ್ಯಕವಿತ್ರಾತ್ ಚಿತ್ರಮ್, “ಚಿತ್ರಮಾಶ್ಚರ್ಯಂ ತತ್ವಾಂ ಚ ಚಿತ್ರಮ್' ಇಂತಹ ಸೂಚನೆಗಳಿಂದ ಅದು ವಿಶದವಾಗುತ್ತದೆ. ಆಧುನಿಕರೂ ಈ ಅರ್ಥವನ್ನೇ ಸಾಮಾನ್ಯವಾಗಿ ಪುರಸ್ಕರಿಸುತ್ತಾರೆ.
©2024 Book Brahma Private Limited.