ಲೇಖಕ ಎಸ್. ಕಾರ್ತಿಕ್ ಅವರ ಕೃತಿ-ಸಂಗೀತ ಶಾಸ್ತ್ರ ಗ್ರಂಥ ಚಂದ್ರಿಕೆ. ಮುಖ್ಯವಾಗಿ ಭರತನಿಂದ ಗೋಪಾಲನಾಯಕನ ವರೆಗಿನ ಭಾರತೀಯ ಸಂಗೀತ ಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳನ್ನು ಕುರಿತು ಈ ಕೃತಿಯು ವಿವರಿಸುತ್ತದೆ. ಭರತಮುನಿ, ಕೋಹಲ, ಕಶ್ಯಪ, ತುಂಬುರು, ಬ್ರಹ್ಮ,ಮಹೇಶ್ವರ, ನಾರದ, ನಂದಿಕೇಶ್ವರ, ಮತಂಗಮುನಿ, ಮಾತೃಗುಪ್ತ, ಶ್ರೀಹರ್ಷ, ಮುಂಜರಾಜ, ಭೋಜರಾಜ, ಕೀರ್ತಿಧರ, ಅಭಿನವಗುಪ್ತಪಾದಾಚಾರ್ಯ, ನಾನ್ಯದೇವ, ಮಮ್ಮಟ, ಚತುರಾನನ ಮುಂತಾದವರ ಮತ್ತು ಅವರ ಕೃತಿಗಳ ಕುರಿತ ಸಂಶೋಧನಾತ್ಮಕ ಬರಹಗಳನ್ನು ಒಳಗೊಂಡಿರುವ ಕೃತಿ ಇದು.
ಎಸ್. ಕಾರ್ತಿಕ್ ಬೆಂಗಳೂರಿನವರು. ತಂದೆ ಕೆ. ಸತ್ಯನಾರಾಯಣ, ತಾಯಿ ಕೆ.ಎಸ್. ಕಾಂತಮ್ಮ. ಸಂಶೋಧನೆಯ ವಿಷಯಗಳು: ವ್ಯಾಕರಣ, ಛಂದಸ್ಸು, ಅಲಂಕಾರ, ನಿಘಂಟು, ಜ್ಯೌತಿಷ, ಸಂಗೀತ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಪುರಾತತ್ತ್ವ, ಹಸ್ತಪ್ರತಿಶಾಸ್ತ್ರ, ಭಾಷಾಶಾಸ್ತ್ರ, ಭಾರತೀಯ ಕಾಲಗಣನೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ ಭಾಷಾ ಪರಿಣಿತರು. ಕೃತಿಗಳು : ಪದಾರ್ಥ ಸಂಪದ, ಕೆಲವು ಕನ್ನಡ ನಿಘಂಟುಗಳು, ಸಂಶೋಧನ ಸಂಭಾನೆ, ಸಂಗೀತಶಾಸ್ತ್ರ ಚಂದ್ರಿಕೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ, ಅಭಿನಂದನಗ್ರಂಥಗಳಲ್ಲಿ ಪ್ರಕಟವಾಗಿವೆ. ಅರಳು ಸಾಹಿತ್ಯ ದತ್ತಿ ಪ್ರಶಸ್ತಿ, ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ‘ಕಾರ್ಯ ಶಿಬಿರ’ಗಳಲ್ಲಿ ...
READ MORE