ಲೇಖಕಿ ಡಾ. ಲಕ್ಷ್ಮೀ ಜಿ. ಪ್ರಸಾದ ಅವರ ಸಂಶೋಧನಾ ಪ್ರಬಂಧ ಕೃತಿ ʻಭೂತಗಳ ಅದ್ಭುತ ಜಗತ್ತುʼ. ಪುಸ್ತಕವು ತುಳುನಾಡಿನವರ ಸಾಂಪ್ರದಾಯಿಕ ಆಚರಣೆಯಾದ ಭೂತ ಕೋಲದ ಕುರಿತು ಹೇಳುತ್ತದೆ. ಇಲ್ಲಿ ಒಟ್ಟು 300 ರಿಂದ 350 ದೈವಗಳ ಕುರಿತಾದ ಮಾಹಿತಿಗಳಿವೆ. ಅಕ್ಕಚ್ಚು, ಅಕ್ಕ ಬೋಳಾರಿಗೆ, ಅಚ್ಚು ಬಂಗೇತಿ, ಚಾಮುಂಡಿ ಗುಳಿಗ, ಅಜ್ಜ ಬೋಳಯ, ಅಡ್ಕತ್ತಾಯ, ಅಬ್ಬಗೆ –ದಾರಗೆ, ಅಟ್ಟೋಡಾಯೆ, ಅಂಕೆ –ಉಮ್ಮಯ, ಅರಸಂಕಲ, ಅಡ್ಯಂತಾಯ, ಅರಮನೆ ಜಟ್ಟಿಗ, ಅಡಿಮಣಿತ್ತಾಯ, ಆಲಿ ಭೂತ ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಇನ್ನೂ ಹಲವಾರು ದೈವಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಈವರೆಗೂ ವಿದ್ವಾಂಸರ ಕೃತಿಗಳಲ್ಲಿ ಹೆಸರು ಕೂಡಾ ದಾಖಲಾಗದ ಸುಮಾರು 180-190 ಭೂತಗಳ ಬಗೆಗಿನ ಪರಿಚಯವನ್ನು ಇಲ್ಲಿ ಲೇಖಕರು ಕಟ್ಟಿ ಕೊಟ್ಟಿದ್ದಾರೆ.
ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ. ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ. ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಎ.ಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್. ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ), ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ...
READ MORE