ಹಾಲು ಮೀಸಲು ಕೆ.ತಿಮ್ಮಯ್ಯ ಅವರ ರಚನೆಯ ಅಧ್ಯಯನ ಕೃತಿಯಾಗಿದೆ. ಜಾತ್ರೆ ಉತ್ಸವ, ಹಬ್ಬ ಹರಿದಿನ, ತೇರು ತಿರುನಾಳು ಅವುಗಳಿಗೆ ಸಂಬಂಧಿಸಿದ ಆಚರಣೆಗಳು, ಸಂಪ್ರದಾಯ, ನಂಬಿಕೆಗಳು ಅವುಗಳ ಹಿಂದಿನ ಉದ್ದೇಶ, ಆಶಯ ಅನುಸರಣೆ ಅನುಕರಣೆ ಇತ್ಯಾದಿ ಎಲ್ಲವೂ ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ. ಪ್ರತೀ ವಿಚಾರದಲ್ಲೂ ಕಾಡುಗೊಲ್ಲರು ಹಾಲು ಮತ್ತು ಮೀಸಲು ಪ್ರಜ್ಞೆಯನ್ನು ಬಯಸುತ್ತಾರೆ. ಹಾಲು ಮೀಸಲಿನಂತೆ ಶುದ್ಧತೆಯನ್ನು ಪಾವಿತ್ರ್ಯವನ್ನು, ಪಾರದರ್ಶಕತೆಯನ್ನು ಬಯಸುತ್ತಾರೆ. ಇದು ಹಾಳಾಗದಂತೆ ಇತರರನ್ನು ನಿರ್ಬಂಧಿಸಲು ಸಾಧ್ಯವಾಗದಿದ್ದಾಗ ತಮ್ಮನ್ನು ತಾವೇ ನಿರ್ಬಂಧಿಸಿಕೊಂಡಿದ್ದಾರೆ. ಹಾಗಾಗಿಯೇ ಈ ಕೃತಿಗೆ 'ಹಾಲುಮೀಸಲು' ಎಂದು ಕರೆಯಲಾಗಿದೆ. ಈ ಪದ ಕಾಡುಗೊಲ್ಲ ಸಂಸ್ಕೃತಿಯ ಅಂತಃಸತ್ತ್ವ ಮಾತ್ರವಲ್ಲ ಪ್ರಭಾವಳಿಯೂ ಆಗಿದೆ. ಇಡೀ ಸಂಸ್ಕೃತಿಯನ್ನು ಪ್ರಭಾವಿಸಿದೆ ಎಂದು ಪುದ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.