’ಚರಿತ್ರೆ ದರ್ಶನ ಮತ್ತು ಸಂಶೋಧನಾ ಮಾರ್ಗ’ ಎಚ್. ಪರಮೇಶ್ವರ ಅವರ ಕೃತಿಯಾಗಿದೆ. "ಜಾಗತೀಕರಣದಂತಹ ಪರಿಸ್ಥಿತಿಯೊಳಗೆ ನಿಂತು ಮನುಷ್ಯ ಜೀವನದ ಯಶೋಗಾಥೆಗಳನ್ನು ಮಾತೃ ಭಾಷೆಯಲ್ಲಿಯೇ ಅರ್ಥೈಸುವ ಮತ್ತು ಕಟ್ಟುವ ಚರಿತ್ರೆಯ ಕೃಷಿ ಚಟುವಟಿಕೆಗಳು ಸರಳ ಸುಲಭವಲ್ಲ. ಚರಿತ್ರೆ ಎಂದರೆ, ಸ್ಪಷ್ಟವಾಗಿ ಇಂಥದ್ದೇ ಎನ್ನುವುದಕ್ಕೆ ಬದಲಾಗಿ ಅದು ಹಿಂದೆ ನಡೆದಿರಬಹುದಾದ ಘಟನೆಗಳ ಬಗೆಗೆ ನಮಗಿರುವ ಜ್ಞಾನ ಎಂಬ ತಿಳಿವಳಿಕೆ ಬಹು ಮುಖ್ಯ. ಚರಿತ್ರೆ ಎಂದರೇನು? ಹಿಂದಿನ ರಾಜರ ಕತೆಗಳನ್ನೇ ಮತ್ತೆ ಮತ್ತೆ ಹೇಳುವುದು, ಅದೇನು ಬದಲಾಗುತ್ತದೆಯೇ? ಅದೇ ಅಶೋಕ, ಅದೇ ಅಕ್ಟರ್. ಇವೆಲ್ಲವೂ ಧ್ವನಿ ಸುರುಳಿಗಳ ಶ್ರವಣ ಎಂದು ಲೇವಡಿ ಮಾಡುವ ಜನರಿದ್ದಾರೆ. ಇವರಿಗೆ ಚರಿತ್ರೆ ಒಂದು ಬದಲಾಗುವ ಅಪೂರ್ಣ ಜ್ಞಾನ: ನಾವೀಗ ತಿಳಿದದ್ದು ಹಿಂದಿನವರಿಗೆ ತಿಳಿದಿರಲಿಲ್ಲ; ನಮಗೀಗ ತಿಳಿಯದ್ದು ಮುಂದಿನವರು ತಿಳಿದಾರು ಎಂಬ ಅರಿವಿಲ್ಲ. ಚರಿತ್ರೆ ಬಲು ಪ್ರಾಚೀನ ಮತ್ತು ಅಮೋಘವಾಗಿದೆ. ಬಹುತೇಕ ಮಹನೀಯರ ಚಾರಿತ್ರಿಕ ಜ್ಞಾನ ಇತ್ತೀಚಿನದು ಎಂದು ತಿಳಿದಿಲ್ಲ. ಅನೇಕ ಭಾರತೀಯರು ಐರೋಪ್ಯರ ಸಂಪರ್ಕದಿಂದಾಗಿ ಚರಿತ್ರೆ ಒಂದು ಅಧ್ಯಯನ ವಿಷಯವಾಯಿತೆಂದು ಭಾವಿಸಿದ್ದಾರೆ" ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಈ ನಿಲುವು ಅವರ ಈ ಕೃತಿಯ ಹಿಂದಿನ ಪ್ರೇರಣೆಯಾಗಿದೆ ಮತ್ತು ಹೊಸದೇ ತಿಳುವಳಿಕೆಯನ್ನು ಇತಿಹಾಸ ಕುರಿತಂತೆ ಹೊಳೆಯಿಸುತ್ತದೆ.
ಎಚ್. ಪರಮೇಶ್ವರ ರವರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ದೋಬೈಲು ಗ್ರಾಮ, ನೇರಲಸರದಲ್ಲಿ ಜನಿಸಿದರು. ತಂದೆ ಹೊನ್ನನಾಯ್ಕ, ತಾಯಿ ದೇವಮ್ಮ, ದೋಬೈಲು, ಹೊಸನಗರ ಶಾಲೆಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರದಲ್ಲಿ ವ್ಯಾಸಂಗ ಮುಂದುವರಿಸಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ, ಎಂ.ಎ, ಪದವಿ ಪಡೆದರು, ಡಾ. ಎ. ಸಿ. ನಾಗೇಶರವರ ಆತ್ಮೀಯ ವಿದ್ಯಾರ್ಥಿಯಾಗಿದ್ದು, ಅವರ ಮಾರ್ಗದರ್ಶನದಂತೆ ಚರಿತ್ರೆ ಉಳುಮೆಯಲ್ಲಿ ತೊಡಗಿರುವರು. ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ...
READ MORE