‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ : ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬುದು ಲೇಖಕಿ ಲಕ್ಷ್ಮೀ.ಜಿ. ಪ್ರಸಾದ್ ಅವರ ಅಧ್ಯಯನ ಕೃತಿ. ತುಳು ನಾಡು ಹತ್ತು ಹಲವು ಸಾಂಸ್ಕೃತಿಕ ಭಿನ್ನತೆಗಳಿಂದ ಕೂಡಿದ್ದು, ಅಧ್ಯಯನ ಯೋಗ್ಯವಾಗಿದೆ. ತುಳು ನಾಡು ಕರ್ನಾಟಕದ ಭಾಗವಾದರೂ ಅದು ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಭಿನ್ನತೆಗಳೊಂದಿಗೆ ತನ್ನದೇ ಆದ ವೈಶಿಷ್ಟ್ಯವನ್ನು ಪಡೆಯುತ್ತದೆ. ಅಲ್ಲಿಯ ಜನರ ಆರಾಧ್ಯದೇವ ನಾಗಬ್ರಹ್ಮನ ಕುರಿತು ಪುರಾಣ-ಇತಿಹಾಸಗಳ ಕುರಿತು ಹೇರಳ ಸಾಮಗ್ರಿ ಇದು. ಮಾತ್ರವಲ್ಲ; ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಈ ಹಬ್ಬಗಳ ಸಾಂಸ್ಕೃತಿಕ ಪರಿಗಳೊಂದಿಗೆ ಹೆಣೆದುಕೊಂಡ ಪರಿಯು ಇಲ್ಲಿ ಅಧ್ಯಯನದ ವಸ್ತು ಆಗಿದೆ.
©2025 Book Brahma Private Limited.