‘ವರ್ಣನಾತ್ಮಕ ಸೂಚೀ’ ಕೃತಿಯು ಬಿ.ಎಸ್. ಸಣ್ಣಯ್ಯ ಅವರ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಂಸ್ಕೃತಿ, ಇತಿಹಾಸ, ಭಾಷಾಚರಿತ್ರೆ-ಇವುಗಳ ಸಮಗ್ರ ಅರಿವಿಗೆ ಶಾಸ್ತ್ರಿಯ ವಾಗಿ ಸಂಪಾದಿಸಿದ ಸಾಹಿತ್ಯ ಅತ್ಯಾವಶ್ಯಕ, ಅಷ್ಟೇ ಅಲ್ಲ, ಕೋಶ, ಅಥವಾ ನಿಘಂಟುಗಳ ರಚನೆಗೆ, ಅವುಗಳ ಮೂಲಘಟಕಗಳಾದ ಶಬ್ದಗಳ ಅರ್ಥ ನಿರ್ಧಾರಕ್ಕೆ ಶಾಸ್ತ್ರೀಯವಾಗಿ ಸಂಪಾದಿಸಿದ ಸಾಹಿತ್ಯಕೃತಿಗಳು ಅನಿವಾರ್ಯವಾಗುತ್ತವೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ಪುನರಚನೆಗೆ ಅಗತ್ಯವಾಗಿ ಬೇಕಾಗಿರುವ ಆನೇಕ ಗ್ರಂಥಗಳು ಇಂದಿಗೂ ಅನುಪಲಬ್ಧವಾಗಿವೆ. ಶಾಸನಗಳಲ್ಲಿ, ಅನೇಕವಿಗಳ ಕೃತಿಗಳಲ್ಲಿ ಉಕ್ತವಾಗಿರುವುದರಿಂದ ಮಾತ್ರ ಹಲವು ಕವಿಗಳ ಮತ್ತು ಗ್ರಂಥಗಳ ಹೆಸರುಗಳು ತಿಳಿದುಬರುತ್ತವೆ. ಈ ಕಾವ್ಯ ಪ್ರಯೋಗ ಪರಿಣತಮತಿ' ಗಳಾಗಿದ್ದ ಕನ್ನಡ ಜನತೆಯ ಬಳಿ ಒ೦ದು ಕಾಲದಲ್ಲಿ ಇವೆಲ್ಲ ಲಭ್ಯವಾಗಿದ್ದಿ ರಬೇಕು, ನಾಡಿನ ಹಲವೆಡೆಗಳಲ್ಲಿ ಓಲೆ ಗರಿಯ ಸಾಹಿತ್ಯ ಅನೇಕ ಶತಮಾನಗಳವರೆಗೆ ತನ್ನ ವೈಭವವನ್ನು ಮೆರೆದಿತ್ತು ಎನ್ನುತ್ತದೆ ಈ ಕೃತಿ.
ಲೇಖಕ, ಸಂಶೋಧಕ ಬಿ.ಎಸ್. ಸಣ್ಣಯ್ಯ ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭೋಗನಹಳ್ಳಿಯಲ್ಲಿ. 1928ರ ಜೂನ್ 18 ರಂದು ಜನನ. ತಂದೆ ಸಣ್ಣೇಗೌಡ, ತಾಯಿ- ಬೋರಮ್ಮ. ಪ್ರಾರಂಭಿಕ ಶಿಕ್ಷಣ ರಾವಂದೂರಿನಲ್ಲಿ , ಪ್ರೌಢಶಾಲಾ ಶಿಕ್ಷಣವನ್ನು ಕೃಷ್ಣರಾಜನಗರದಲ್ಲಿ ಪೂರ್ಣಗೊಳಿಸಿದರು. ಮೈಸೂರು ವಿವಿಯಿಂದ ಬಿ.ಎ. ಆನರ್ಸ್, ಎಂ.ಎ, ಬಿ.ಲಿಬ್ ಪದವಿಗಳ ಜೊತೆಗೆ , ಡಿಪ್ಲೊಮಾ ಇನ್ ಅರ್ಕೈವ್ಸ್ ಮೈಸೂರು ವಿವಿಯಿಂದ ಪ್ರಾಚ್ಯ ಸಂಶೋಧನಾಲಯದಲ್ಲಿ ವೃತ್ತಿ ( 1956) ಆರಂಭಿಸಿದರು.ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದರು. ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನೇಮಿಚಂದ್ರ ...
READ MORE