“ತೋರಣಗಲ್ಲು” ಚಾರಿತ್ರಿಕ ಅಧ್ಯಯವಾಗಿದ್ದು, ಅಬ್ದುಲ್ ಹೈ. ತೋರಣಗಲ್ಲು ಈ ಕೃತಿಯನ್ನು ಹೊರತಂದಿದ್ದಾರೆ. ಇಲ್ಲಿ ಅವರ ಊರಾದ ತೋರಣಗಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಮಹಾರಾಜ, ರಾಜ, ಸಾಮಂತ, ಸಂಪತ್ತು, ಯುದ್ಧ, ಕೋಟೆ, ಮೀನಾರಗಳು, ಬಹುಪರಾಕುಗಳು, ಶಾಸನಗಳು ಇಂತವು ಒಳಗೊಂಡಿದ್ದೆ ಇತಿಹಾಸವೆಂದು ತಿಳಿದಿದ್ದ ನಮಗೆ ಸಾಹಿತಿ ಹಾಗೂ ಸಂಶೋಧಕರಾದ ಅಬ್ದುಲ್ ಹೈ.ತೋರಣಗಲ್ಲು ಅವರು ತಮ್ಮ ತೋರಣಗಲ್ಲು ಚಾರಿತ್ರಿಕ ಅಧ್ಯಯನ ಕೃತಿಯ ಮೂಲಕ ಇತಿಹಾಸವೆಂದರೆ ಅದಷ್ಟೇ ಅಲ್ಲ ಅಲ್ಲಿನ ಭ್ರಾತೃತ್ವ, ಸಹಬಾಳ್ವೆ, ಮಾನವೀಯತೆ, ಸ್ಥಳೀಯ ಸಾಧಕರ ಪರಿಚಯದ ಮೂಲಕ ನೆನ್ನೆಯ ಕಳೆದ ಕ್ಷಣದ ವರೆಗಿನ ಘಟನಾವಳಿಗಳನ್ನು ಮರಿಹಕ್ಕಿ-ಮುದಿಹಕ್ಕಿ ಎಂಬ ಎರಡು ಕಾಲ ಸೂಚಿತ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಇತಿಹಾಸ ಈ ತೋರಣಗಲ್ಲು ಚಾರಿತ್ರಿಕ ಅಧ್ಯಯನ ಕೃತಿಯಲ್ಲಿ ವಿಶಿಷ್ಟವೆನಿಸುವುದು ಮತ್ತು ಎಂಥವರಿಗೂ ಇಷ್ಟವಾಗುವುದು ಅದರ ನಿರೂಪಣ ಶೈಲಿ.
ಲೇಖಕ ಅಬ್ದುಲ್ ಹೈ ತೋರಣಗಲ್ಲು ಅವರು ಕಾವ್ಯಮನೆ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿಯೂ ಸೇವೆ ಕಾರ್ಯನಿರ್ವಹಿಸಿದ್ದರು. ಕಥೆ, ಕಾವ್ಯ, ಸಾಹಿತ್ಯ ವಿಮರ್ಶೆ ವೈಚಾರಿಕ ಲೇಖನಗಳು, ಚಾರಿತ್ರಿಕ ಅಧ್ಯಯನ ಗಜಲ್ ಹೀಗೆ ವಿವಿಧ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದಾರೆ. ಕಾವ್ಯಮನೆ, ಗಜಲ್ ನಾದಲೋಕ, ಗಜಲ್ ಸಂಭ್ರಮ, ಗಜಲ್ ತೊರೆ, ಒಲಿದಂತೆ ಹಾಜುವೆ, ಸೇರಿದಂತೆ ಹಲವು ಸಾಹಿತ್ಯಿಕ ಗುಂಪುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಗಜಲ್ ಸಂಕಲನ ‘ಆತ್ಮಧ್ಯಾನದ ನಾದ’ 2021ರಲ್ಲಿ ಕಾವ್ಯಮನೆ ಪ್ರಕಾಶನದಿಂದಲೇ ಪ್ರಕಟವಾಗಿದೆ ...
READ MORE