‘ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ’ ಹಂಪಿ ಕನ್ನಡ ವಿ.ವಿ.ಪ್ರಸಾರಾಂಗ ಪ್ರಕಟಿಸಿರುವ ವಿಶೇಷ ಕೃತಿ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿದ್ವಾಂಸರೊಂದಿಗೆ ನಾಡಿನ ಪ್ರಮುಖ ವಿದ್ವಾಂಸರ ಬರೆಹಗಳನ್ನು ಮತ್ತು ಅನುವಾದಗಳನ್ನು ಈ ಸಂಪುಟಗಳು ಒಳಗೊಂಡಿವೆ.
ಚರಿತ್ರೆ ಅಥವಾ ಸಮಾಜವಿಜ್ಞಾನಗಳ ಜ್ಞಾನಶಿಸ್ತಿನಲ್ಲಿ ಕನ್ನಡದಲ್ಲಿ ಚರ್ಚೆಗಳು ಕಡಿಮೆ ಎನ್ನುವ ಮಿತಿಗಳನ್ನು ಈ ಸಂಪುಟಗಳು ಮೀರಿವೆ. ದೇಸೀ ಭಾಷೆಗಳಲ್ಲಿ ಜಗತ್ತಿನ ಜ್ಞಾನ ಪ್ರಕಾರಗಳನ್ನು ಸಮರ್ಥವಾಗಿ ನಿಭಾಯಿಸುವುದು ನಮ್ಮ ಭಾಷೆ, ಪರಂಪರೆ ಹಾಗೂ ಅನನ್ಯತೆಗಳನ್ನು ಕಾಪಾಡುವ ಬಗೆ ಈ ಪ್ರಯತ್ನದ ಒಂದು ಆಯಾಮವಾಗಿದೆ.
ಈ ಕೃತಿಯ ಪ್ರಧಾನ ಸಂಪಾದಕ ಪ್ರೊ. ವಿಜಯ್ ಪೂಣಚ್ಚ ತಂಬಂಡ ಮತ್ತು ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು 'ಚರಿತ್ರೆ ಬರವಣಿಗೆ ಕ್ರಮಗಳು ಮತ್ತು ಸಂಶೋಧನಾ ವಿಧಾನ' ಸಂಪುಟವನ್ನು ಸಮರ್ಥವಾಗಿ ಹೊರತಂದಿದ್ದಾರೆ.
ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...
READ MORE