ಸಂವಿಧಾನ ಮತ್ತು ವಚನಗಳು

Author : ಹೆಚ್. ಎನ್. ನಾಗಮೋಹನದಾಸ್

₹ 120.00




Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಲೇಖಕ ಹೆಚ್.ಎನ್. ನಾಗಮೋಹನದಾಸ್ ಅವರ ಕೃತಿ ʻಸಂವಿಧಾನ ಮತ್ತು ವಚನಗಳುʼ. ಪುಸ್ತಕದಲ್ಲಿ ಶರಣರ ವಚನಗಳು ಹಾಗೂ ನಮ್ಮ ಸಂವಿಧಾನದ ಕೆಲವು ಮೂಲ ತತ್ವಗಳ ನಡುವಣ ಸಂಬಂಧವನ್ನು ವಿವಿಧ ನೆಲೆಗಳಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಆಹಾರ, ಅಕ್ಷರ ಹಕ್ಕುಗಳ ಕುರಿತಾದ ಹಲವು ವಿಷಯಗಳು ಸಂವಿಧಾನದಲ್ಲಿ ಸೇರ್ಪಡೆಯಾಗಿವೆ. ಈ ಹಿನ್ನೆಲೆಯಲ್ಲಿ ಇವುಗಳ ನಡುವಿನ ಸಂಬಂಧವನ್ನು ಪರಿಶೀಲಿಸುವ ಪ್ರಯತ್ನ ಇಲ್ಲಿ ನಡೆದಿದೆ.

 ಪುಸ್ತಕದ ಬೆನ್ನುಡಿಯಲ್ಲಿ ಸಿದ್ದನಗೌಡ ಪಾಟೀಲ ಅವರು, “ಕೃತಿಯಲ್ಲಿ ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿವೆ ಎಂಬ ಅಂಶವನ್ನು ತಮ್ಮ ಆಳವಾದ ಅಧ್ಯಯನ ವಿಶ್ಲೇಷಣೆಯ ಮೂಲಕ ನಾಗಮೋಹನದಾಸ್ ಅವರು ಸಾದರಪಡಿಸಿದ್ದಾರೆ. ವಿಶ್ವದ ಮತ್ತು ಭಾರತೀಯ ಪರಂಪರೆಯಲ್ಲಿ ಜೀವಪರ ಚಿಂತನೆಗಳು ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ ಸೆಣಸುತ್ತಲೇ ಬಂದಿವೆ. ಅಂಥ ಕೆಲವು ತಾತ್ವಿಕ ಧಾರೆಗಳನ್ನು ಪ್ರಸ್ತಾಪಿಸುತ್ತ 12ನೆಯ ಶತಮಾನದ ಬಸವಣ್ಣ ಮತ್ತು ಎಲ್ಲ ಶರಣರ ವಚನಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ವಚನಗಳನ್ನಾಧರಿಸಿ, ತುಲನಾತ್ಮಕವಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ. ಬುದ್ಧ, ಬಸವ, ಇತರ ವಚನಕಾರರು ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ ಅವರುಗಳು ಸಮಕಾಲೀನರಲ್ಲವಾದರೂ ಅವರೆಲ್ಲರಲ್ಲಿ 'ಜೀವ ಕೇಂದ್ರಿತ', 'ಮನುಷ್ಯ ಕೇಂದ್ರಿತ' ತುಡಿತಗಳು, ಚಿಂತನೆಗಳು ಹೇಗೆ ಸಮಾನ ಆಶಯಗಳನ್ನು ಹೊಂದಿವೆ ಎಂಬುದನ್ನು ಈ ಕೃತಿಯಲ್ಲಿ ನೋಡಬಹುದು. ವಚನ ಚಳುವಳಿ ಮತ್ತು ಭಾರತದ ಸಂವಿಧಾನ ಪ್ರತಿಪಾದಿಸಿದ ಮಾನವೀಯ ಸಮಾಜದ ನಿಯಮಗಳು, ಆದರ್ಶಗಳು, ಹಕ್ಕು ಮತ್ತು ಕರ್ತವ್ಯಗಳು ಇಂದಿನ ಸಂಘರ್ಷಮಯ ಸಮಾಜಕ್ಕೆ ದಿಕ್ಸೂಚಿಗಳಾಗಿವೆ. ಅಂಥ ದಿಕ್ಸೂಚಿಯನ್ನು ಈ ಕೃತಿ ಒಳಗೊಂಡಿದೆ” ಎಂದು ಹೇಳಿದ್ದಾರೆ.

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books