ಮಕ್ಕಳ ಸಾಹಿತ್ಯ ಕುರಿತು ಅಪಾರ ಆಸ್ಥೆಯುಳ್ಳವರಾದ ಆನಂದ ಪಾಟೀಲ ಅವರು ರಚಿಸಿರುವ ಮಹತ್ವದ ಕೃತಿ ಇದು. ಪಾಶ್ಚಾತ್ಯ ಮಕ್ಕಳ ಸಾಹಿತ್ಯ ಕುರಿತ ಒಂದು ಸಮಗ್ರ ಚಿತ್ರವನ್ನು ಈ ಕೃತಿ ಕಟ್ಟಿಕೊಡುತ್ತದೆ. ಕೃತಿಯ ಬೆನ್ನುಡಿಯಲ್ಲಿ ಹೇಳಲಾಗಿರುವಂತೆ, ಭಾಷೆಯ ಅನುಕೂಲ, ಪುಸ್ತಕೋದ್ಯಮದ ಭರಾಟೆ, ಮಾರುಕಟ್ಟೆಯ ವಿಸ್ತೃತ ಜಾಲಗಳಿಂದ ಅನಾಯಾಸವಾಗಿಯೇ ದೊರಕಿಕೊಂಡಿರುವ ವಾತಾವರಣದಲ್ಲಿ, ಪಾಶ್ಚಾತ್ಯ ಮಕ್ಕಳ ಸಾಹಿತ್ಯ ತನ್ನ ಅಸ್ಮಿತೆಯನ್ನು ಗಾಢವಾಗಿಸಿಕೊಂಡಿರುವುದರ ಜೊತೆಗೆ, ಬಗೆಬಗೆಯ ವೈವಿಧ್ಯತೆಯನ್ನೂ ವಿಸ್ತಾರದ ಹರಹನ್ನೂ ಪಡೆದುಕೊಳ್ಳಲು ಸಾಧ್ಯವಾಗಿದೆ. ವಿದ್ವತ್ ಜಗತ್ತನ್ನು ಸೆಳೆಯುವಲ್ಲಿ ಅದು ಯಶಸ್ವಿಯಾಗಿದೆ. ಹಾಗಾಗಿ ಕನ್ನಡದಂಥ ಪರಿಸರದಲ್ಲಿನ ಮಕ್ಕಳ ಸಾಹಿತ್ಯಾಸಕ್ತರು ಅತ್ತ ಹೊರಳದೆ ಇರಲು ಸಾಧ್ಯವಾಗದು. ಆ ಬಗೆಯ ಒಂದು ಹೊರಳು ನೋಟವನ್ನು ಈ ಕೃತಿ ಹೇಳುತ್ತದೆ.
©2024 Book Brahma Private Limited.