ಕನಕದಾಸರ ಸಾಹಿತ್ಯ ದರ್ಶನ ಜಗನ್ನಾಥ. ಆರ್. ಗೇನಣ್ಣವರ ಕೃತಿಯಾಗಿದೆ. ಮಾಯೆ ಮಾನವನ ಬಹುದೊಡ್ಡ ಶತ್ರು. ಮಾಯೆ ಅಂಧಕಾರದ ಅಮೂರ್ತ ರೂಪ, ಮಾಯೆಯ ಉಗಮಕ್ಕೆ ಯಾರು ಕಾರಣರು ಎಂಬ ಪ್ರಶ್ನೆಯನ್ನು ಹಾಕಿದಾಗ 'ದೈವ' ಎಂಬ ಉತ್ತರ ಹುಟ್ಟುತ್ತದೆ. ಮಾಯೆ ದೈವದೊಳಗೋ ದೈವದೊಳಗೆ ಮಾಯೆಯೋ ವಿವರಿಸಲಾಗದು ದೇಹದೊಳಗೇ ಹರಿಯೋ ಹರಿಯೊಳಗೆ ದೈವವೋ ವಿವರಿಸಲಾಗದು. ಇದು ದೈವ ಮಾಯೆ. ಮತ್ತು ಮಾನವ ಸಂಬಂಧ. ಇದೊಂದು ಅಪೂರ್ವ ಕೀರ್ತನೆಯಾಗಿದೆ. ಸಂಬಂಧಗಳ ನೆಲೆಯಲ್ಲಿ ವಿವರಿಸಲ್ಪಡುವ ಈ ಕೀರ್ತನೆ ವಿಶಿಷ್ಟ ಅನುಭವದ ಅಭಿವ್ಯಕ್ತಿಯಾಗಿದೆ. ''ಕನಕದಾಸರ ಸಾಹಿತ್ಯ ದರ್ಶನ'' ಈ ಕೃತಿ ವಿಶಿಷ್ಟವಾಗಿದೆ. ಹಲವು ನೆಲೆಗಳಲ್ಲಿ ನಿಂತು ಕನಕದಾಸರ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಡಿ. ತಂಗರಾಜು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.