ಲೇಖಕ ಹರೀಶ್ ಮಂಜೊಟ್ಟಿ ಹಾಗೂ ಡಾ. ನವೀನ್ ಕುಮಾರ್ ಮರಿಕೆ ಅವರು ರಚಿಸಿದ ಕ್ಷೇತ್ರ ಪರಿಚಯ ಮಾಲೆ ಕೃತಿ ʻಮರಕ್ಕೂರು ಜನನದ ದೈವಗಳುʼ. ಪುಸ್ತಕದಲ್ಲಿ ಜೀವನ್ ದಾಸ್ ಅವರು, “ ದೇವರು ಇದ್ದಾನೆ, ಇಲ್ಲ ಎನ್ನುವ ವಾದಕ್ಕೆ ಬಹುತೇಕ ಕೊನೆ ಇಲ. ಶೇ.90ರಷ್ಟು ಜನ ದೇವರನ್ನು ಅಥವಾ ಅಗೋಚರ ಶಕ್ತಿಯನ್ನು ನಂಬುವವರು. ಇಲ್ಲದಿದ್ದರೆ ಬೇರೆ ಬೇರೆ ದೋಷಗಳಿಂದ ತಾವು ಬಳಲುತ್ತೇವೆ ಎನ್ನುವುದು ಅವರ ನಂಬಿಕೆ. ಇದರಿಂದ ಮುಕ್ತಿಯನ್ನು ಪಡೆಯಬೇಕು ಎನ್ನುವುದಿದ್ದರೆ ದೇವರ ಆರಾಧನೆ ಮಾಡುವುದರ ಮೂಲಕ ತನ್ನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕೆಂದು ತಿಳಿಯುತ್ತಾರೆ. ಎಲ್ಲಾ ನಂಬಿಕೆಗಳು ಆಂತರ್ಯದಿಂದ ಬಂದವುಗಳು ಅಥವಾ ಮನಸ್ಸಿಗೆ ಸಂಬಂಧಿಸಿದವು. ಭೌತ ವಿಚಾರವನ್ನು ನಾನು ಬಹಳ ಸುಲಭದಲ್ಲಿ ದೂರ ಮಾಡಲು ಸಾಧ್ಯ. ಆದರೆ ಮನಸ್ಸಿನೊಳಗಿನ ನಂಬಿಕೆಯನ್ನು ಅಷ್ಟು ಸುಲಭದಲ್ಲಿ ದೂರ ಮಾಡಲು ಸಾಧ್ಯವಾಗುವುದಿಲ್ಲ. ನಂಬಿಕೆಯಿಂದಾಗಿ ಶ್ರದ್ಧಾಕೇಂದ್ರಗಳು ಬೆಳೆಯುತ್ತಾ ಹೊಸರೂಪವನ್ನು ಪಡೆಯುತ್ತಾ ಹೋಗುತ್ತವೆ. ದಂತಕಥೆ, ಕಥೆಗಳು ಸತ್ಯಸಂಗತಿ ಎನ್ನುವಷ್ಟರ ಮಟ್ಟಿಗೆ ಭಾವನೆಗಳು ನಮ್ಮೊಳಗೆ ಬೆಳೆಯುತ್ತವೆ. ನಮ್ಮ ನಾಡಿನಲ್ಲಿ ದೈವಾರಾಧನೆ ಸಾರ್ವತ್ರಿಕವಾಗಿದೆ. ಮೊದಲಿನಿಂದಲೂ ಡಾ. ನವೀನ್ ಕುಮಾರ್ ಮರಿಕೆ ಮತ್ತು ಶ್ರೀ ಹರೀಶ್ ಮಂಜೊಟ್ಟಿ ಇವರಿಗೆ ಬರವಣಿಗೆಯ ಮೇಲೆ, ಹಳೆಯ ವಸ್ತುಗಳನ್ನು ಸಂಗ್ರಹಿಸುವ ಬಗ್ಗೆ, ನೇಮ, ಕೋಲ, ದೇವರ ಆರಾಧನೆಯಲ್ಲಿ ಭಾಗವಹಿಸುವ ವಿಚಾರಗಳಲ್ಲಿ ಅಪರಿಮಿತ ಆಸಕ್ತಿ, ಜನರ ಭಕ್ತಿಭಾವಗಳನ್ನು ತಿಳಿದುಕೊಳ್ಳುವ ಪ್ರಯತ್ನ ಇವರದು. ಅತ್ಯಂತ ಪ್ರಾಚೀನ ಆರಾಧನ ಕೇಂದ್ರವಾದ ಮರಕ್ಕೂರು ಜನನ ಕ್ಷೇತ್ರದ ಸಲಕ್ಕೆತ್ತಾಯ, ರಕೇಶ್ವರಿ ಮೊದಲಾದ ಹತ್ತಾರು ದೈವಗಳ ಪರಿಚಯ, ಪದ ವಿಶ್ಲೇಶಣೆಯಿರುವ ಕೃತಿಯಿದು” ಎಂದು ಹೇಳಿದ್ದಾರೆ.
ಲೇಖಕ ಹರೀಶ್ ಮಂಜೊಟ್ಟಿ ಅವರು ಮೂಲತಃ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಂಜೊಟ್ಟಿಯವರು. ದಿ. ಚಂದಪ್ಪ ಗೌಡ ಹಾಗೂ ಯಶೋಧಾ ಅವರ ಮಗನಾಗಿ ಜನಿಸಿದ ಇವರು, ಬಂಟ್ವಾಳದ ಸರಕಾರಿ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ತಂಗಡಿಯ ಕರಾಯದಲ್ಲಿ ಪ್ರೌಢ ಶಿಕ್ಷಣ, ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ. ಮತ್ತು ಪದವಿ ಶಿಕ್ಷಣಗಳನ್ನು ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋಲಿಸ್ ಇಲಾಖೆ ನಡೆಸುವ ಕ್ರೀಡಾಕೂಟದಲ್ಲಿ ಸತತ ಎರಡು ಬಾರಿ ರಾಜ್ಯ ಮಟ್ಟದಲ್ಲಿ ಆಡಿದ ಅನುಭವ ...
READ MORE