`ಮಣ್ಣಿನ ಕಸುವು’ ಸುರೇಶ್ ನಾಗಲಮಡಿಕೆ ಅವರ ಲಂಕೇಶ್ ಕಥನ ಅಧ್ಯಯನವಾಗಿದೆ. ಲಂಕೇಶ್ ಸಾಧ್ಯವಿದ್ದಷ್ಟು ಮನುಷ್ಯ ಗ್ರಹಿಸುವ ಬಹುತೇಕ ಸಂಗತಿಗಳನ್ನು ಒಳಗುಮಾಡಿಕೊಂಡಿದ್ದಾರೆ. ನನಗೆ ತಿಳಿದ ಮಟ್ಟಿಗೆ ಯಾವ ಮನುಷ್ಯ ಭಾವನೆಗಳನ್ನು ಕೇವಲ ಸೋಗಲಾಡಿತನಗಳಿಗೆ, ಡೋಂಗೀತನಗಳಿಗೆ ಒಗ್ಗಿಸಿಕೊಳ್ಳುವನೋ, ಆತ ನಿಜಕ್ಕೂ ಅಪ್ರಾಮಾಣಿಕನಾಗಿರುತ್ತಾನೆ. ಯಾವ ಮನುಷ್ಯ ತನ್ನ ಒಳಗನ್ನು ಸದಾ ಎಚ್ಚರದಿಂದ ಇಟ್ಟುಕೊಂಡು, ಸಮಾಜದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುತ್ತಾನೋ ಆತ ಪ್ರಾಮಾಣಿಕನಾಗಲು ಯತ್ನಿಸುತ್ತಲೇ ಇರುತ್ತಾನೆ. ಇಂಥವನು ಬದುಕನ್ನು ಸೂಕ್ಷ್ಮವಾಗಿ ಗ್ರಹಿಸುವ ಹಂತದಲ್ಲಿರುತ್ತಾನೆ. ಲಂಕೇಶರ ಕಥನದಲ್ಲಿ ಈ ಎರಡೂ ಬಗೆಯ ವ್ಯಕ್ತಿಗಳನ್ನು ಕಾಣಲು ಸಾಧ್ಯ.
ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಸುರೇಶ್ ನಾಗಲಮಡಿಕೆ ಅವರು ಹುಟ್ಟಿದ್ದು ಆಂಧ್ರದ ಗಡಿಭಾಗ ಪಾವಗಡದ ನಾಗಲಮಡಿಕೆಯಲ್ಲಿ. ಸದ್ಯ ಜನಪದ ಮಹಾಕಾವ್ಯಗಳ ಅಧ್ಯಯನದಲ್ಲಿ ತೊಡಗಿಸಿಕೊಡಿರುವ ಇವರು ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಕನಕ ಸಾಹಿತ್ಯ ಮತ್ತು ಲೋಕದೃಷ್ಟಿ, ಕಾಣ್ಕೆ ಕಣ್ಕಟ್ಟು, ಬಯಲಾಗುವ ಪರಿ, ಉಳಿದದ್ದು ಆಕಾಶ, ಹಲವು ಬಣ್ಣದ ಹಗ್ಗ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆಗಳಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಸುರೇಶ್ ಅವರ ಹೇಚ್ಚಿನ ಪುಸ್ತಕಗಳು ಗದ್ಯಕ್ಕೇ ಸೇರಿವೆ. ...
READ MORE