ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ-ಹಿನ್ನೆಲೆ

Author : ಟಿ. ಆರ್. ಅನಂತರಾಮು

Pages 580

₹ 800.00




Year of Publication: 2023
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

ಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್‌ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ. ಈ ಸಂಪುಟದಲ್ಲಿ ಸೇರಿಸಿರುವ ಉಪಪಂಗಡಗಳು ಇವು: ಬಬ್ಬೂರುಕಮ್ಮೆ-ಉಲುಚುಕಮ್ಮೆ-ಸೀರ್ನಾಡು-ಬಡಗನಾಡು-ಹೊಯ್ಸಳ ಕರ್ನಾಟಕರು-ಹಳೆ ಕರ್ನಾಟಕರು (ಮೂಗೂರು)-ಶುಕ್ಲಯಜುರ್ವೇದಿಗಳು-ಹವ್ಯಕರು-ಮಲೆನಾಡ ಹೆಬ್ಬಾರರು-ಕಾಶ್ಮೀರಿ ಬ್ರಾಹ್ಮಣರು-ಕೋಟ ಬ್ರಾಹ್ಮಣರು-ಶಿವಳ್ಳಿ ಬ್ರಾಹ್ಮಣರು-ಕಂದಾವರ ಬ್ರಾಹ್ಮಣರು-ಸ್ಥಾನಿಕರು-ಸಾರಸ್ವತ ಬ್ರಾಹ್ಮಣರು-ಗೌಡಸಾರಸ್ವತ ಬ್ರಾಹ್ಮಣರು-ಮುಲಕನಾಡು-ವೆಲನಾಡ-ಆರುವೇಲು ನಿಯೋಗಿಗಳು-ನಂದವರೀಕರು-ವಂಗೀಪುರಂ ಬ್ರಾಹ್ಮಣರು-ಸಂಕೇತಿಗಳು-ಬೃಹಚ್ಚರಣರು-ವಡಮಾ ಅಯ್ಯರ್‌ಗಳು-ದೀಕ್ಷಿತರು-ದೇಶಸ್ಥರು-ಚಿತ್ಪಾವನರು-ಕರಹಾಡ ಬ್ರಾಹ್ಮಣರು.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books